ಗುರುವಾರ, ಆಗಸ್ಟ್ 16, 2018

416.ಭಾವಗೀತೆ-1

ಒಂದು ಸಂಜೆ..

ನಾನು ನೀನು ಬಂದು ನಿಂತು
ಮನದ ಭಾವ ಉಕ್ಕಿ ಹರಿದು
ನಿನ್ನ ಕಣ್ಣ ಕಾಂತಿ ಬಂದು
ನನ್ನ ಎದೆಯ ಹಾಸಿ ಹೊದ್ದು..

ಬಯಕೆ ನೆಗೆದು ಪುಟಿದು ಕುಣಿದು
ಮುಸ್ಸಂಜೆ ಸೂರ್ಯ ಕಿರಣ ಚುಚ್ಚಿ
ನನ್ನ ಎದುರು ಏನು ಎನುತ
ನಾಚಿ ನೀರು ಮಾಡಿ ಬಿಡುತ...

ಒಡಲ ಹಸಿವ ತಣಿಸಿ ಬಂದು
ಮನದಿ ಖುಷಿಯ ಚೆಲ್ಲಿ ಇಂದು
ನಾನೆ ನೀನು ನೀನೆ ನಾನು
ಎನುವ ಭಾವ ತುಂಬಿ ತಾನು..

ಜೀವ ಪ್ರೀತಿ ಪ್ರೇಮ ಚೆಲ್ಲಿ
ಮನದ ಭಾಗ್ಯ ಪದಗಳಲ್ಲಿ
ಆರಾಮದುಸಿರು ಉದರದಲ್ಲಿ
ರವಿಯ ಕಿರಣ ಚೆಲ್ಲಿತಲ್ಲಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ