ಶನಿವಾರ, ಆಗಸ್ಟ್ 11, 2018

410. ಮಗಳಿಗೆ ಕರೆ

ಮಗಳಿಗೆ ಕರೆ

ಮಗಳೆ ಕೆಟ್ಟವರ ಸುಡುವ ಬೆಂಕಿಯಾಗು ನೀ
ಕಷ್ಟಗಳ ಎದುರಿಸುವ ಬೆಟ್ಟವಾಗು ನೀ

ಮನಗಳ ಸಂತೈಸುವ ತಾಯಾಗು
ಕನಸುಗಳ ಸಾಕಾರಗೊಳಿಸುವ ಮೂರ್ತಿಯಾಗು

ಬೇಸರದಿ ನೊಂದವರಿಗೆ ಸಾಂತ್ವನ ನೀಡಿ
ವೈಜ್ಞಾನಿಕ ವಿಶ್ಲೇಷಣೆಗಳ ಗೂಡಾಗು..

ವೈರತ್ವವ ಮರೆತು ಗೆಳೆತನವ ಮೆರೆದು
ಬದುಕ ಬಂಗಾರಗೊಳಿಸುವ ಬಳ್ಳಿಯಂತಾಗು..

ವೈಮನಸ ಸಮಾಧಾನಿಸುವ ಗುರುವಾಗು
ಕೈಹಿಡಿದು ನಡೆಸುವ ಕರುಣಾಮಯಿಯಾಗು..

ವೇದ ಪಾಂಡಿತ್ಯವೇ ಪಡೆಯಬೇಕೆಂದಿಲ್ಲ
ಬದುಕಿಗೆ ಬೇಕಾದ ಮನುಷ್ಯತ್ವವಿರಲಿ..

ಬುದ್ಧಿಯ ಉಪಯೋಗಿಸಿ ಜೀವಿಸಬೇಕು
ಶುದ್ಧ ಮಾತು-ಕೆಲಸಗಳ ಮಾಡಬೇಕು..

ತನ್ನತನವೇ ಮೇಲೆಂದು ವಾದಿಸದೆ
ಪರರ ಭಾವನೆಗಳಿಗೂ ಮಾನ್ಯತೆ ನೀಡು..

ಬದುಕಿ ಬದುಕಲು ಬಿಟ್ಟು ಸರ್ವಜನ ಸುಖ ಬಯಸುವ
ಭಾರತೀಯಳಾಗಿ ಮೆರೆವ ಮಾನವಳಾಗು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ