ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-7
ನಾವು ವಾಸಿಸುವ ಭೂಮಿ, ನೆಲ-ಜಲ, ವಾಯು ಇದೇ ಪ್ರಕೃತಿ ಎನಿಸಿಕೊಳ್ಳುತ್ತದೆ. ನಮಗೆ ಬೇಕಾದ್ದನ್ನು ಬೇಕಾದಷ್ಟು ಬಳಸಿಕೊಳ್ಳುವ ಸ್ವಾತಂತ್ರ್ಯವನ್ನೂ ಪ್ರಕೃತಿಯೇ ನಮಗೆ ನೀಡಿದೆ. ಆದರೆ ಅದನ್ನು ಅತಿರೇಕವಾಗಿ ಬಳಸಿ, ಇತರರಿಗೆ ಉಪಯೋಗಿಸದ ಹಾಗೆ ಮಾಡುವ ದುರ್ಬುದ್ಧಿ ಮನುಜನಿಗಿದೆ.
ತಾನು ಉಪಯೋಗಿಸಬೇಕು, ತನ್ನ ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ಬೇಕು, ಬೇರೆಯವರಿಗೆ ಸಿಗಬಾರದು ಎಂಬ ದುರಾಸೆ ಮಾನವನಿಗೆ ಒಳಿತಲ್ಲ. ನಮ್ಮ ನೆಲಕ್ಕೆ ನಾವೇ ವಿಷ ಸುರಿದು ನಮ್ಮ ಮುಂದಿನ ಜನಾಂಗಕ್ಕೆ ವಿಷವುಣಿಸುವ ಕಾರ್ಯವೆಸಗುವುದು, ಕುಡಿಯುವ ನೀರಿಗೆ ಪ್ಲಾಸ್ಟಿಕ್ ಹಾಕಿ, ರಾಸಾಯನಿಕಗಳ ಸುರಿದು, ತಾನು ಬೆಳೆಯುವ ಆಹಾರಕ್ಕೆಲ್ಲ ವಿಷ ಹಾಕಿ ತನ್ನ ಹೊಟ್ಟೆಗೆ ತಾನೇ ಅದನ್ನು ಸೇರಿಸಿಕೊಂಡು, ಆರೋಗ್ಯ ಸರಿಯಿಲ್ಲವೆಂದು ಡಾಕ್ಟರಿಗೆ ಲಕ್ಷಗಟ್ಟಲೆ ದುಡಿದುದನ್ನೆಲ್ಲಾ ಸುರಿದು ಬದುಕುವ ಮಾನವನಿಗೆ ಏನೆನ್ನಬೇಕೋ...
ಭುವಿಯಲಿ ಬದುಕುವ ಎಲ್ಲಾ ಪ್ರಾಣಿಗಳೂ ಮಾನವನಂತೆ ನಾಳೆಯ ಬಗ್ಗೆ ಯೋಚಿಸಿ ಕೂಡಿಡುತ್ತಿದ್ದರೆ ಏನಾಗುತ್ತಿತ್ತು ನಾವೇ ಯೋಚಿಸಬೇಕಾಗಿದೆ..
ಒಟ್ಟಾರೆಯಾಗಿ ಮುಂದಿನ ಜೀವನಕ್ಕೆ, ಮುಂದಿನ ಜನಾಂಗಕ್ಕೆ ಪ್ರಕೃತಿಯನ್ನು ಹೇಗೆ ಉಳಿಸಬೇಕೋ, ಹೇಗೆ ಬೆಳೆಸಬೇಕೋ ನಾವೇ ಯೋಚಿಸಬೇಕು! ನೀವೇನಂತೀರಿ?
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ