ಬಸವೇಶ್ವರಗೆ ನಮನ
ಬಂದನು ನಮ್ಮಯ ನಾಡಿಗೆ ಬಸವ
ತಂದನು ಸರ್ವ ಜನಕೆ ಸಂತಸವ
ಜಾತಿ ಒಡಕುಗಳು ಬೇಡೆಂದ
ಮಹಿಳೆಗೆ ಉನ್ನತಿ ಬೇಕೆಂದ
ಮೇಲು-ಕೀಳನು ದೂಡಿರೆಂದ
ಮನುಜರೆಲ್ಲರು ಒಂದೇ ಎಂದ
ಬಸವೇಶ್ವರ ಬಂದ ಜನರನು ಸೆಳೆದ
ಎಲ್ಲ ಮನುಜರೂ ಸಮಾನರೆಂದ
ಸಮಗಾರನಿಗೂ ಬೇಧವ ಮಾಡದೆ
ಅಂತರ್ಜಾತಿ ವಿವಾಹ ಮಾಡಿದ
ಬಸವನು ಎಲ್ಲರ ಮನೆಗ್ಹೋದ
ಎಲ್ಲರ ಜನಮನ ಸೆಳೆಯುತ ಗೆದ್ದ
ವಾಸ್ತವತೆಯನು ಮೆರೆದು ಬಿಟ್ಟ
ಕಾಯಕವೇ ಕೈಲಾಸವೆಂದು ಬಗೆದ
ಉಳ್ಳವ ಶಿವಾಲಯ ಮಾಡುವರೆಂದ
ತನ್ನ ದೇಹವೆ ದೇವರ ದೇಗುಲವೆಂದ
ಬಾಗೇವಾಡಿಗೆ ಕೀರ್ತಿಯ ತಂದ
ಬಗೆಬಗೆ ವಚನವ ಬರೆದು ಮೆರೆದ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ