ಕೊಡದಿರು ನೋವ
ನನ್ನ ಬದುಕು ಬರಡು ಎಂದು
ನೀನು ಬಳಿಯ ಬರದಿರಲು ಇಂದು
ನಿನ್ನ ನಗೆಯೆ ನನ್ನ ನಗುವು
ನಿನ್ನ ಒಲವು ನನಗೆ ಗೆಲುವು...
ನನ್ನ ನಲ್ಲೆ ಬದುಕಲೊಲ್ಲೆ
ನೀನು ಇರದೆ ನಾನಿರಲು ಒಲ್ಲೆ..
ಜಾಣೆ ನೀನು ನಾನು ಬಲ್ಲೆ
ನಿನ್ನ ಬಿಟ್ಟು ಇರಲು ಒಲ್ಲೆ...
ಮನದಿ ಹೃದಯದಲ್ಲಿ ನೀನೆ
ಏತಕೀ ಕೋಪ ನನ್ನ ಕನ್ಯೆ
ಕೆಂಪಾಗಿದೆ ನಿನ್ನ ಮಧುರ ಕೆನ್ನೆ
ಕೊಡುವೆ ನಿನಗೆ ನನ್ನ ಜೀವವನ್ನೆ
ನೀನೆ ನನ್ನ ಬದುಕ ಹೂವು
ನೀನೆ ಬಾಳು ಬೆಳಗೊ ಕಾವು
ನೀನಿರದಿರೆ ನನ್ನ ಸಾವು
ಕೊಡದಿರೆಂದು ನನಗೆ ನೋವು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ