ದೇವನೊಲವು...
ಬದುಕಿನಲ್ಲಿ ದೇವ ನೀನು
ಪರೀಕ್ಷೆ ಮಾಡುತಿರುವೆ ನನ್ನ
ದುಃಖದೊಡನೆ ಹಲವು ಖುಷಿಯು
ನೋವಿನಲ್ಲು ನಲಿವ ಹಿತವು..
ನನ್ನದೆಂಬುದೇನಿದೆ ಜಗದಲಿ
ನಿನ್ನದೆಲ್ಲವಾಗಿದೆ ಬಾಳಲಿ..
ಕಣ್ಣ ಬಿಂಬ ನೀನಾಗಿರುವೆ..
ಕಿವಿಯ ಶಬ್ದವೂ ನಿನ್ನದಾಗಿದೆ..
ಎದೆಯ ಭಾವವೆಲ್ಲ ಕರಗಿ
ನಿನ್ನ ನಾಮದಿಂದ ಬೆಳಗಿ
ನಿತ್ಯ ನಿನ್ನ ಸ್ಮರಿಸು ಎಂದಿದೆ
ಬದುಕು ಎನ್ನ ರಂಗೇರಿದೆ..
ಭವದ ಭಯವು ಬೇಡವೆನಗೆ
ನಿನ್ನ ದಯೆಯು ಸಾಕು ನನಗೆ
ನಮ್ಮ ಮನದ ಬಾಗಿಲು
ತೆರೆದು ಬಿಡು ನಿತ್ಯಲೂ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ