ಭಾನುವಾರ, ಆಗಸ್ಟ್ 19, 2018

423.ಭಾವಗೀತೆ-6

ನಿಧಿ

ಮುಕ್ಕಾಲು ಭಾಗ ಭೂಮೀಲಿ ನಿನಗೆ
ಸರ್ವಸ್ವ ಅವಿತಿಹುದು ನಿನ್ನೊಡಲೊಳಗೆ
ಸಾಗರ ಮಾತೆ ನೀಡು ಎಮಗೆ
ಸದ್ಗತಿಯ, ತೂರುವೆವು ಕಸ ನಿನ್ನಲ್ಲಿಗೆ..

ಎಣ್ಣೆ,ರಾಸಾಯನಿಕ ತಂದು ಸುರಿದು
ಪ್ಲಾಸ್ಟಿಕ್ ಮಾಲೆಯನು ಅಲ್ಲೆ ಎಸೆದು
ವಾಹನದ ಭಾಗಗಳ ನೀರಲ್ಲೆ ತೊಳೆದು
ಅದರ ಮೀನನ್ನು ಜನರೇ ತಿಂದು

ಸಾರಿಗೆ ಸಂವಹನಕೆ ನೀನೇ ಬೇಕು
ಜಲಚರಗಳ ಊಟ ನಿನ್ನಿಂದ ಸಿಗಬೇಕು
ಖುಷಿಗೂ ನಿನ್ನ ದಡವೆ ಸಾಕು
ಮನುಜನೇ ಇನ್ನಷ್ಟು ಕಸ ತಂದು ಹಾಕು!!!?

ಬೇಡಿದ್ದು ಕೊಡುವ ನೀ ನವನಿಧಿಯು
ಜೀವನಾಧಾರಕ್ಕೆ ನೀ ತಪೋಸಿರಿಯು
ಆರೋಗ್ಯ ಆನಂದ ಸರ್ವವ ನೀಡುವೆ
ನಾ ನಿನಗೆ ಬೇಡದ ಕಸಗಳ ಎಸೆವೆ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ