ಮುದ್ದು ಮರಿ
ನನ್ನ ಮುದ್ದು ಮರಿ
ನೀನು ನನ್ನ ಕರಿ
ನೋಡು ಕುರಿ-ಮರಿ
ತಿನ್ನು ಜಾಣಮರಿ...
ಚಂದಮಾಮ ನೋಡು
ಒಳ್ಳೆ ನಿದ್ದೆ ಮಾಡು
ಸೋಮಾರಿತನವ ದೂಡು
ಜಗಕೆ ಸಂದೇಶ ನೀಡು..
ಜಾಣನಾಗು ಮಗುವೆ
ಮುಗ್ಧನಾಗು ಮನವೇ
ಜಾಗೃತನಾಗು ಜೀವನವೇ
ಬರಿದಾಗದಿರು ಉತ್ಸಾಹವೇ
ಮನದಿ ಸಂಕಲ್ಪ ತೊಡು
ಬೇಸರವ ತೊರೆದು ಬಿಡು
ನಗು-ಸಂತಸವ ಕೊಡು
ಹೊಟ್ಟೆಕಿಚ್ಚು ಸುಟ್ಟು ಬಿಡು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ