ಶುಕ್ರವಾರ, ಆಗಸ್ಟ್ 24, 2018

431.ಭಾವಗೀತೆ-12

ನನ್ನಮ್ಮ

ತಾ ಹಾಲುಣಿಸಿದ ಕಂದ
ತನ್ನೊಡಲಲ್ಲೆ ಮಲಗಿ ಒದ್ದಾಗ
ತನ್ನ ಹೊಟ್ಟೆಯನ್ನೆ ಸೀಳ ಹೊರಟಾಗ

ಕ್ಷಮಯಾ ಧರಿತ್ರಿಯೂ ಹೀಗಿರಲು
ಕ್ಷಮೆಯ ಮರೆತು ಬಿಡುವಳು
ವಿಕೋಪಕ್ಕೆ ತಿರುಗಿ ಬಿಡುವಳು

ಮಾಡಿದ ತಪ್ಪಿಗೆ ಶಿಕ್ಷೆಯನುಭವಿಸ ಬೇಕು
ಮೇಲು ಕೀಳು ನಾಶವಾಗ ಬೇಕು
ಬಡವ ಬಲ್ಲಿದ ಒಂದಾಗಬೇಕು..

ಮಾನವಗೆ ಬುದ್ಧಿ ನೀ ನೀಡಿದೆಯಮ್ಮ
ತನ್ನ ತಪ್ಪಿನ ಅರಿವು ಮೂಡಿಸಿದೆಯಮ್ಮ
ತನ್ನೊಳಗೆ ತಾನೆ ಬೇಸರಿಪನಮ್ಮ

ಹಲವರಿಗೆ ಇನ್ನೂ ಸಾಲದು ಶಿಕ್ಷೆ ನಿನ್ನ
ಹಾಕಿಹರು ಮುರಿದ್ಹೋದ ಮನೆಗೆ ಕನ್ನ
ತೋರಿಸವರಿಗೆ ನಿನ್ನ ಉಗ್ರ ಪ್ರತಾಪವನ್ನ

ಬರಲಿ ಬುದ್ಧಿ ಮಾತೆ ಮಗಳ ರಕ್ಷಿಸಲು
ಹೆಣ್ಣು ಮಕ್ಕಳಿಗೆ ಗೌರವ ಕೊಡಲು
ಕಷ್ಟಪಟ್ಟು ದುಡಿದು ಬದುಕಿ ಪ್ರೀತಿ ಹಂಚಲು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ