ಮಂಗಳವಾರ, ಆಗಸ್ಟ್ 21, 2018

427. ಭಾವಗೀತೆ-8

ಬಾಳ ದಾರಿ

ಬಾಳದಾರಿಯಲ್ಲಿ ನಿತ್ಯ
ಒಂಟಿ ಪಯಣ ಎಂದೂ ಸತ್ಯ
ಪಯಣಿಗನಿಗೆ ಬೇಕು ಬೆಳಕು
ನಡೆಸುತಿರಲು ನಿತ್ಯ ಬದುಕು..

ನಮ್ಮ ಮನವೆ ನಮ್ಮೊಡಲಿಗೆ
ಬೆಳಕ ಕೇಂದ್ರ ಬಿಂದುವು
ಮನದರಿವೆ ಬಾಳಿನೊಡನೆ
ಬೆಳಕ ತರುವ ಮಂತ್ರವು..

ತನುಮನವ ಬೆಳಗಬೇಕು
ವಿದ್ಯೆಯೆಂಬ ಬೀಜವು
ಗಿಡಮರವ ಬೆಳೆಸಬೇಕು
ಸತ್ಯ ಧರ್ಮ ನ್ಯಾಯವು..

ಕರುಣೆ ಮೆರೆದು ಬಾಳುವಂಥ
ಶಕ್ತಿ ನೀಡು ಭಗವಂತ
ಪರ ಜೀವಿಗೆ ಬೆಳಕಾಗಿ
ಬಾಳಬೇಕು ಹಿತವಾಗಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ