ಯಾರಿಗೆ ಬಂತು ಸ್ವಾತಂತ್ರ್ಯ
ಬಂತೋ ಬಂತು ಸ್ವಾತಂತ್ರ್ಯ
ಯಾರಿಗೆ ಬಂತು ಸ್ವಾತಂತ್ರ್ಯ..
ಬಚ್ಚಲು ಎಂದರೆ ಏನೆಂದೇ ತಿಳಿಯದ
ಬಯಲಲೆ ಮಲ-ಮೂತ್ರವ ವರ್ಜಿಪ
ಸ್ವಚ್ಛತೆ ಎಂದರೆ ಗೊತ್ತೇ ಇರದ
ಹಳ್ಳಿಗರಿಗೆ ಬಂತೇ ಸ್ವಾತಂತ್ರ್ಯ?
ಒಲೆಯನು ಬಿಟ್ಟು ಹೊರಗೇ ಬಾರದ
ಪಾತ್ರೆಗಳೊಂದಿಗೆ ಸಂಭಾಷಣೆ ಮಾಡುವ
ಮದುವೆ ಎಂದರೆ ಅಡಿಗೆ ಕಾರ್ಯವೆಂದರಿತ
ಮನೆಯಾಕೆಗೆ ಬಂತೇ ಸ್ವಾತಂತ್ರ್ಯ?
ಬೆಳಗ್ಗೆ ಹೋಗಿ ಸಂಜೆಗೆ ಬರುವ
ಊಟಕೆ ಒಂದಿಷ್ಟು ಬುತ್ತಿಯ ಒಯ್ವ
ಆಫೀಸ ಸಂಬಳಕಾಗಿ ತಿಂಗಳ ಕಾಯ್ವ ಅಪ್ಪಗೆ ಬಂತೇ ಸ್ವಾತಂತ್ರ್ಯ?
ಸುಳ್ಳೇ ಹೇಳುತ ಹಳ್ಳಿಯ ಸುತ್ತುತ
ಓಟಿಗಾಗಿ ನೋಟನು ದೂಡುತ
ಬಾಯಲಿ ಬಡಾಯಿ ಕೊಚ್ಚುತಲಿರುವ
ರಾಜಕಾರಣಿಗೂ ಬಂತೆ ಸ್ವಾತಂತ್ರ್ಯ?
ಮನವನು ತೊಳೆಯಿರಿ ಮಾನವ ಉಳಿಸಿರಿ
ಧರ್ಮವನೆಂದು ರಕ್ಷಣೆ ಮಾಡಿರಿ
ಎಂದೆನುತಧರ್ಮವ ಮಾಡಿದ
ಸ್ವಾಮಿಗಳಿಗೆ ಬಂತೇ ಸ್ವಾತಂತ್ರ್ಯ?
ಬಿಳಿಯ ಬಟ್ಟೆಯ ಹೊದ್ದುಕೊಂಡೆ
ಪ್ರಪಂಚದ ತಲೆಗಳ ಉರುಳಿಸ ಹೊರಟ
ತನ್ನನು ತಾನೂ ಕೊಲ್ಲಲು ಹೊರಟ
ಭಯೋದ್ಪಾದಕಗೆ ಬಂತೇ ಸ್ವಾತಂತ್ರ್ಯ?
ಮೊಬೈಲನು ಒತ್ತುತ ಕೆಲಸವ ಮರೆತು
ಬೇಡದ್ದು ನೋಡಿ ಕಾಲವ ಕಳೆದು
ಹೆಣ್ಣನು ಕೆಟ್ಟ ದೃಷ್ಠಿಲೆ ನೋಡುವ
ಹುಡುಗರಿಗೆ ಬಂತೇ ಸ್ವಾತಂತ್ರ್ಯ?
ಹಾಯ್ ಬಾಯೆನ್ನುತ ಮರುಳನು ಮಾಡಿ
ಪ್ರೀತಿಯ ಕೂಪಕೆ ತಳ್ಳುತ ಓಡಿ
ಹಣವನು ಕಿತ್ತು ಕೈಕೊಟ್ಹೋಗುವ
ಹುಡುಗಿಗೆ ಬಂತೇ ಸ್ವಾತಂತ್ರ್ಯ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ