ಏತಕೀ ಬಗೆ?
ವರುಣ ದೇವನೆ ನಿನಗೆ
ಎನ್ನ ಮೇಲೇಕೀ ದರ್ಪವು?
ನಿನ್ನ ಮೇಲೆ ಸುರಿಸುರಿದು
ಹರಿಸಿಹೆ ಜಲಧಾರೆಯ..
ಆಪತ್ಕಾಲದಿ ನಾನು ಬಯಸುವ
ಜಲವು ಜೀವಿಗೆ ಬದುಕಲು
ಅದುವೆ ಹಾರಾಡಲು ತೊಳೆದು
ಕಳೆವುದು ಜೀವಿಯಾ ಆಗರವು..
ತೊಳೆದು ಒಗೆದು ಸ್ವಚ್ಛಗೊಳಿಸೆ
ನಿನ್ನ ಇರವದು ನಿರಂತರ
ನೀನು ಇಲ್ಲದೆ ಬದುಕೆ ಇಲ್ಲ
ನನ್ನ ಪಾಲಿಗೆ ನೀನೆ ಎಲ್ಲ..
ವರುಣನಾರ್ಭಟ ಕಾದ ಇಳೆಗೆ
ಕಷ್ಟ ಬೆಳೆಯ ಬೆಳೆಯೊ ರೈತಗೆ
ಮಳೆಯ ನೀರಿಗೂ ಬೇಕು ಇತಿಮಿತಿ
ತಡೆಯಲಾರೆವೆ ಈ ಪರಿಸ್ಥಿತಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ