ಗುರುವಾರ, ಸೆಪ್ಟೆಂಬರ್ 12, 2019

1203. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-57

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-57

   ಮನಸ್ಸು ನಮ್ಮದು ಸದಾ ಚಂಚಲ. ದೈಹಿಕವಾಗಿ ನಾವು ಬಲಾಢ್ಯರಾಗಿದ್ದೇವೆ ಎಂದರೆ ನಮ್ಮ ಮನಸ್ಸು ಗಟ್ಟಿಯಾಗಿದೆ ಎಂದರ್ಥ. ಜೀವನದಲ್ಲಿ ನಾವೇನು ಮಾಡುತ್ತಿರುವೆವೋ ಅದಕ್ಕೆಲ್ಲ ಕಾರಣ ಮನಸ್ಸು, ಸಂತಸ, ಖುಷಿ, ಕೋಪ, ದ್ವೇಷ, ತಿರಸ್ಕಾರ, ಆರಾಧನೆ, ಗೆಳೆತನ, ನೆಮ್ಮದಿ!
       ಮಾನವ ಜನ್ಮ ದೊಡ್ಡದು. ಏಕೆಂದರೆ ಮಾತು ಎಂಬ ಗುಣದಿಂದ! ಆದರೀಗ ಮಾತೇ ಕಡಿಮೆಯಾಗಿದೆ! ಟಿ.ವಿ. ಹಾಗೂ ಮೊಬೈಲ್ ಫೋನುಗಳು, ಅದರಲ್ಲೂ ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್ ಗಳಿಂದ ನಾವು ಬರಹದಲ್ಲಿ ಹೆಚ್ಚು ಮಾತನಾಡುತ್ತೇವೆ, ಬಿಟ್ಟರೆ ಫೋನಿನಲ್ಲೆ ಮಾತೇ ಹೊರತು ಪಕ್ಕದಲ್ಲಿರುವ ಮಡದಿ, ಪತಿ, ಮಕ್ಕಳೊಡನೆ ಅತಿಯಾದ ಮಾತಿಲ್ಲದೆ, ಮಕ್ಕಳೂ ಕೂಡಾ ಇಂದು ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್ ಗಳಿಗೆ ದಾಸರಾಗುತ್ತಿದ್ದಾರೆ!
     ಮನಸ್ಸನ್ನು ನೆಮ್ಮದಿ, ಆರೋಗ್ಯವಾಗಿಡಲು ಧ್ಯಾನ, ವ್ಯಾಯಾಮಗಳನ್ನು ಮಾಡಲು ಕರೆ ನೀಡಲಾಗುತ್ತಿದೆ! ಅದನ್ನು ಪಾಲಿಸುವವರು ಒಂದು ಶೇಕಡಾ ಜನ ಮಾತ್ರ !  ಉಳಿದಂತೆ ಮೊಬೈಲ್ ಟಿವಿಗಳಿಗೆ ಅಡಿಕ್ಟ್ ಆಗಿರುವವರೇ ಹೆಚ್ಚು! ಬುದ್ಧಿವಂತರಾಗಿ ತಮ್ಮ ಬುದ್ಧಿಗೆ ತಕ್ಕ ಅವಕಾಶಕ್ಕಾಗಿ ಜನ ಕಾಯುತ್ತಿರುವಾಗ ತಮ್ಮ ಬುದ್ಧಿಯನ್ನು ಹೆಚ್ಚಿಸಲು ಧ್ಯಾನದ ಮೊರೆ ಹೋಗುವರು. ದಿನಕ್ಕೆ ಹದಿನೈದು ಬಾರಿ ಧೀರ್ಘವಾಗಿ ಓಂಕಾರ(ಆಮಿನ್ ಅಥವಾ ಆಮೆನ್) ಎಂದರೂ ಸಾಕು ಪ್ರತಿನಿತ್ಯ.  ನೀವೇನಂತೀರಿ?
@ಪ್ರೇಮ್@
26.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ