ಶನಿವಾರ, ಸೆಪ್ಟೆಂಬರ್ 14, 2019

1219. ಒಂದಿಷ್ಟು ....

ಮನುಷ್ಯ ಸಂಬಂಧಗಳನ್ನರಿಯದ ಮರ್ಕಟ ಮನಸ್ಸುಗಳಿಗೆ ಧಿಕ್ಕಾರವಿರಲಿ..

ಸಮಾಜದಲ್ಲಿ ಎರಡು ರೀತಿಯ ಹೃದಯದ ಮನುಜರಿರುವರು. ಒಂದು ಸದಾ ಸಹಾಯ ಮಾಡುವ ಪರರ ಹಿತ ಬಯಸುವ, ಸರ್ವರಿಗಾಗಿ ಪ್ರಾರ್ಥಿಸುವ ಜನರು. ಮತ್ತೊಂದು ಇತರರ ಏಳಿಗೆಯನ್ನು ಸಹಿಸದ ಮಾರಿಗಳು. ಅಂತಹ ರಾಕ್ಷಸರು  ನಿಮ್ಮ ಮನೆಯ ಪಕ್ಕದಲ್ಲೂ ಇರಬಹುದು.

ಹೌದು, ಹೆಣ್ಣೊಬ್ಬಳು ದುಡಿದು ತಿನ್ನುತ್ತಾ ತನ್ನಷ್ಟಕ್ಕೆ ತಾನೇ ದಿಟ್ಟತನದಿಂದ ಬದುಕುತ್ತಿದ್ದರೆ ಕಾಮಾಲೆ ಕಣ್ಣಿನ ಈ ದಿಟ್ಟ ಸಮಾಜ ಅದನ್ನು ಸಹಿಸುವುದಿಲ್ಲ. ಸಹೋದರ ಪ್ರೇಮಕ್ಕೂ ಪ್ರೀತಿಯ ಹಣೆಪಟ್ಟಿ ಕಟ್ಟಿ ಗಂಡ ಹೆಂಡಿರನ್ನು ಬೇರೆ ಮಾಡಲು ನೋಡುವ ಕುನ್ನಿಗಳಿಗೆ ಧಿಕ್ಕಾರವಿರಲಿ. ತನ್ನ ಮನೆಯ ಕಾವಲಿಯೇ ತೂತಾಗಿದ್ದರೂ ಇತರರ ಮನೆಯ ದೋಸೆ ತೂತೆಂದು ಸಾರುವ, ಪರರ ಬದುಕಲು ಬಿಡದ ನಾಯಿ ಮುಖದವರನ್ನು ಯಾವ ದೇವರೂ ಸುಮ್ಮನೆ ಬಿಡಲಾರರು.

     ತಮ್ಮಷ್ಟಕ್ಕೆ ತಾವೇ ಬದುಕುವವರಿಗೆ ಸುಳ್ಳು ಹಣೆಪಟ್ಟಿ ಕಟ್ಟಿ ಬೊಗಳುವ ನಾಯಿಗಳಿಗೆ, ವಾನರಗಳಿಗೆ, ಮಂಗ ಮೂತಿಯ ಮನುಜರಂತಿರುವ ಪ್ರಾಣಿಗಳಿಗೆ ಈಶ್ವರ, ಅಲ್ಲಾ, ಏಸು ಒಟ್ಟಾಗಿ ಹಿಡಿ ಶಾಪ ಹಾಕಲಿ. ಹೆಣ್ಣಿನ ಕಣ್ಣಲ್ಲಿ ಕಣ್ಣೀರು ತರಿಸಿದವನ ಮಕ್ಕಳಿಗೂ, ಸಹೋದರರಿಗೂ ಕಣ್ಣೀರ ಕೋಡಿ ಹರಿಯಲಿ. ಬೇರೆಯವರ ಸಂಸಾರಕ್ಕೆ ವಿಷ ಬೆರೆಸಲು, ಹುಳಿ ಹಿಂಡಲು ಪ್ರಯತ್ನಿಸಿದ ನರ ರಾಕ್ಷಸನ  ಸಂಸಾರ ತುಂಡು ತುಂಡಾಗಲಿ.
      ತಾನು ದುಡಿಯದಿದ್ದರೂ ದುಡಿಯುತ್ತಾ ಕಷ್ಟ ಪಡುತ್ತಾ ಬದುಕುತ್ತಿರುವವರನ್ನು ನೋಡಲಾಗದೆ ವಿಷ ಕಾರುವವರಿಗೆ ಶನಿ ಕಾಟ ಬರಲಿ. ಮನೆ ಮನ ಸುಟ್ಟು ಬೂದಿಯಾಗಲಿ. ತಪ್ಪಾಗಿ ಅರ್ಥೈಸಿ, ತಮ್ಮತನವನ್ನು ಪಾಲಿಸದೆ ಇತರರಿಗೆ ಕಾಟ ಕೊಡುವ ಕೀಟಗಳ ದೇಹವನ್ನು ಹುಳ ತಿನ್ನಲಿ. ಮನಸು ಕೆಡಿಸಿದ ಅವರ ಮನಗಳು ಹರಿದು ಹಂಚಿ ಹೋಗಿ ನಾಯಿ ನರಿಗಳು ತಿಂದು ತೇಗಲಿ. ಬೇಡದ ಹೇಳುವ ನಾಲಗೆ ಬಿದ್ದು ಹೋಗಲಿ.

      ಇತರರ ಬಗ್ಗೆ ಕೀಳಾಗಿ ಮಾತನಾಡಿ ಸಂಸಾರ ಕೆಡಿಸುವ ಜಂತುಗಳು ತಿಗಣೆಗಳಿದ್ದ ಹಾಗೆ. ಜಿಗಣೆಗಳು ಅವರ ರಕ್ತ ಹೀರಲಿ. ನರಕದರ್ಶನ ಅವರಿಗಾಗಲಿ. ನಂಬಿದ ದೇವರು ಅವರ ಕೈ ಬಿಡಲಿ. ಮಾಡಿದ ಯಾವುದೇ ಪುಣ್ಯ ಕಾರ್ಯ ಫಲಿಸದಿರಲಿ. ಕೈ ಕಾಲು ಕಣ್ಣು ಕಳೆದುಕೊಂಡು ಕಾಡಿನಲ್ಲಿ ನೀರಿಲ್ಲದೆ ಅಲೆಯುವಂತಾಗಲಿ. ಅವರ ಮಕ್ಕಳಿಗೂ ಅದು ಅನ್ವಯಿಸಲಿ. ಬೇರೆಯವರನ್ನು ನೆಮ್ಮದಿಯಿಂದ ಬದುಕಲು ಬಿಡದ ಮನುಜ ಮುಖದ ರಾಕ್ಷಸರ ಸಂತಾನ ಕ್ಷಯಿಸಲಿ. ಮಕ್ಕಳು ರೋಗಿಗಳಾಗಲಿ, ಗಂಡ ಹೆಂಡತಿ ಸಂಬಂಧ ಕೆಡಲಿ. ಕೈ ಕಾಲು ಮುರಿದು ಮೂಲೆ ಸೇರುವಂತಾಗಲಿ. ಮಾಡದ ತಪ್ಪಿಗೆ ದೂಷಿಸಿದ್ದಕ್ಕೆ ತಾವೂ ಮಾಡದ ತಪ್ಪಿಗೆ ಸರ್ವರಿಂದ ದೂರಾಗಿ ಒಂಟಿ ಪಿಶಾಚಿಯಂತೆ ಪರದಾಡುವಂತಾಗಲಿ.

    ಒಳ್ಳೆ ಕೆಲಸ ಮಾಡಿದ ಸರ್ವರೂ ಸದಾ ಕಾಲ ನಗುತ್ತಾ ಬಾಳಲಿ. ದೇವರು ಅವರನ್ನೆಂದೂ ಕೈ ಬಿಡದಿರಲಿ. ನಗು ಅವರ ಮುಖದಿ ಯಾವಾಗಲೂ ಉದಯಿಸಲಿ. ಅವರ ಮಕ್ಕಳು, ಕುಟುಂಬ ಉನ್ನತ ಮಟ್ಟಕ್ಕೇರಲಿ. ನೀವೇನಂತೀರಿ?
@ಪ್ರೇಮ್@
14.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ