ಗುರುವಾರ, ಸೆಪ್ಟೆಂಬರ್ 19, 2019

1220. ಕಲಾಮ್ ರಿಗೆ

ಕಲಾಮ್ ರಿಗೆ..

ಅಬ್ದುಲ್ ಕಲಾಮ್ ನೆಂದರೆ ಏನೋ
ಮಮಕಾರ ಪ್ರೀತಿಯೆಮಗೆ ಅನವರತ
ಭರತ ಮಾತೆಗೆ ಬೇಕಿನ್ನೇನೋ
ಆಸರೆಯ ವೈಜ್ಞಾನಿಕ ಬೆಳಕು ನಿರತ..

ರಾಕೆಟ್ , ರಕ್ಷಣೆ, ಉಪಗ್ರಹ ಕಳುಹಿಸಿ
ಇಪ್ಪತ್ತರ ಕನಸನು ನನಸಾಗಿಸೆ ಪ್ರಯತ್ನಿಸಿ
ಹೆತ್ತ ಹೊತ್ತ ತಾಯಿ ಋಣ ತೀರಿಸಿ
ಗುರುವಿಗೆ ಗುರುವಾದ ಮನುಜನ ಪೂಜಿಸಿ!

ಬಡತನದಲಿ ಬೆಳೆದು ಸಿರಿತನದ ಜೀವನ
ಹೃದಯ ವೈಶಾಲ್ಯದಿ ಬದುಕದು ಪಾವನ,
ಆಸೆಯು ಅಧಿಕ ದೇಶದ ಮೇಲೆ
ವಿದ್ಯಾ ಸಂಪತ್ತೆಲ್ಲವು ದೇವನ ಲೀಲೆ!

ಜ್ಞಾನದ ಅಲೆಯು ಜಗಕೆ ಹಿತವು
ಕಲಿಕೆಯ ಬಲವು ದೇಶಕೆ ಹಿತವು
ಮಣಿ ಮುಕುಟವು ನಿನ್ನಯ ಯೋಜನೆಯು
ಮತ್ತೆ ಹುಟ್ಟಿ ಬಾ ಕಾಯುತಿದೆ ಜನತೆಯು..
@ಪ್ರೇಮ್@
17.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ