ಗುರುವಾರ, ಸೆಪ್ಟೆಂಬರ್ 26, 2019

1227. ತರಗತಿ

ತರಗತಿ

ಅಂದಿನ ತರಗತಿ ಗಂಡನಿಗಿತ್ತು
ರಂಜಿಯ ಮೊಗದಲಿ ಸಂತಸವಿತ್ತು!
ತಾನೇ ಮೇಲೆನುವ ಅಹಂ ಇತ್ತು!
ತನ್ನ ಕೇಳುವ ಗಂಡ ತನ್ನದೇ ಸ್ವತ್ತು!

ಊಟವ ಹೊರಗೆ ಮಾಡಲು ತಾಕೀತು!
ಹೊಸ ಸೀರೆಗೆ ಒಂದು ಡಿಮ್ಯಾಂಡಿತ್ತು!
ನೆಕ್ಲೆಸ್ ಕೂಡಾ ಬೇಕಿತ್ತು!
ತಂಗಿ ಮದುವೆಗೆ ಹೋಗೋದಿತ್ತು!

ಅತ್ತೆ ಮನೆಯನು ದೂರೋದಿತ್ತು!
ಅತ್ತಿಗೆ ನೋಟವ ಹೇಳೋದಿತ್ತು!
ಮೈದುನ ಕಾಟವ ತಡಿಬೇಕಿತ್ತು!
ಮಾವನ ಸೇವೆ ಮಾಡಿಯೇ ಸುಸ್ತು!

ತಂಗಳು ತಿಂದು ಸಾಕಾಗಿತ್ತು!
ಅತ್ತೆಯ ದರ್ಬಾರ್ ಜೋರಾಗಿತ್ತು!
ಗಂಡನ ಬಾಯಿಗೆ ಬೀಗವೆ ಇತ್ತು!
ಮನೆಯಲಿ ಬೇರಾರು ಇಲ್ಲದ ಹೊತ್ತು!

ರಂಜಿಗೆ ತಾಕತ್ ಬಂದೇ ಬಂದಿತ್ತು!
ನಾಯಿಯ ಹೊರಗೆ ಕಟ್ಟಿ ಹಾಕಿತ್ತು!
ಗಂಡನ ಕೂರಿಸಿ ಸಮಾಜಾಯಿಸಬೇಕಿತ್ತು!
ಪ್ರೀತಿಯು ಕೋಪದ  ಕಡೆ ತಿರುಗಿತ್ತು!

ಅಮ್ಮನ ಫೋನ್ 'ಬರುವೆ' ಎಂದಿತ್ತು!
ಗಂಡನ ಕಛೇರಿಗೆ ರಜೆಯೇ ಇತ್ತು!
ಕ್ಲಾಸಿಗೆ ಸಮಯ ಸರಿಯಾಗಿತ್ತು!
ಹೇಳಲು ಬಹಳವೆ ತಯಾರಿ ನಡೆದಿತ್ತು!

ಗಂಡನ ಕರೆದು ಕುರ್ಚಿಯನಿತ್ತು,
ಮಾತಿಗೆ ಶುರುವಿಟ್ಟು ವಿಷಯವನಿತ್ತು,
ಬೇಕಾದ ವಸ್ತುಗಳ ಪಟ್ಟಿಯನಿತ್ತು,
ತರದಿರೆ ಸಾಯುವೆನೆನುವ ಮಸಲತ್ತು!

ಪತಿರಾಯಗೆ ನೋಡುತ ತಲೆ ತಿರುಗಿತ್ತು!
ರೇಷ್ಮೆಯ ಸೀರೆ, ಚಿನ್ನದ ನೆಕ್ಲೆಸ್ ಮತ್ತು
ಕಾಲಿಗೆ ಚೈನು, ಕೈ ಬಳೆ ಬೇಕಿತ್ತು!
ಪಟ್ಟಿಯು ಮತ್ತೂ ಬೆಳೆದಿತ್ತು!

ಮಾತಾಡಿದರೆ ಮಡದಿಗೆ ಅಳು ಬರುತಿತ್ತು!
ಪಟ್ಟಿಯ ಜೇಬಲಿ ಇಳಿ ಬಿಟ್ಟಿತ್ತು!
ಸಂಜೆಯೆ ಬಳೆಯಂಗಡಿಗೆ ಕಾಲು ಹೊಕ್ಕಿತ್ತು!
ಚಿನ್ನದ ಹಾಗಿನ ಒಡವೆ ಕೇಳಿತ್ತು!

ಒಂದೇ ಸಾವಿರಕೆ ಎಲ್ಲವೂ ಬಂತು!
ಗಂಡನ ಮುಖದಲಿ ನಗೆ ಬರುತಿತ್ತು!
ಲಕ್ಷವ ಉಳಿಸಿದ ಸಂತಸವಿತ್ತು!
ಗಾಡಿಯು ಮನೆಕಡೆ ತಿರುಗುತಲಿತ್ತು..
@ಪ್ರೇಮ್@
20.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ