ಗುರುವಾರ, ಸೆಪ್ಟೆಂಬರ್ 12, 2019

1216. ನಾನು ನಾನೇ

ನಾನು ನಾನೆ

ನಾನು ನೀನಾಗಲು ನಾ ಬಿಡಲಾರೆ!
ಏಕೆಂದರೆ ನಾನು ನಾನೇ ಆಗಿರಬಯಸುವೆ!
ನೀನು ನಾನಾಗಲು ನಾನೇನನ್ನೆ?
ನಾನು ನೀನಾಗಲು ನೀನೇನನ್ನುವೆ?
ನಾನು ನಿನ್ನ ನನ್ನುಸಿರೆನಬಹುದು!
ನೀ ನನ್ನ ನಿನ್ನುಸಿರೆನಬಹುದು!
ನಿನ್ನ ನನ್ನ ಹೃದಯವೆನಬಹುದು!
ನನ್ನ ನಿನ್ನ ಬದುಕೆನಬಹುದು!
ನಾ ನೀ ಮಾತಲೇನು ಬೇಕಾದರೂ ಅನಬಹುದು!
ಆದರೆ ನಾ ನೀನಲ್ಲ, ನೀ ನಾನಲ್ಲ!
ನಾನು ನಾನೇ, ನೀನು ನೀನೇ!

ನಿನ್ನೂಟವ ನಾ ಮಾಡಲಾರೆ!
ನಿನ್ನ ದೇಹಕೆ ಬಟ್ಟೆ ನಾ ತೊಡಲಾರೆ!
ನಿನ್ನ ಗಾಳಿಯ ನಾ ಸೇವಿಸಿ ನಿನ್ನ ಬದುಕಿಸಲಾರೆ!
ನಿನ್ನ ಹೆಸರಿನೊಡನೆ ನನ್ನ ಹೆಸರ ಸೇರಿಸಬಲ್ಲೆನಷ್ಟೆ!
ನಿನ್ನ ಹೆಸರಿಗೆ ನನ್ನ ಹೆಸರ ಕೊಡಲಾರೆ!
ನಿನ್ನ ದನಿಗೆ ನಾ ದನಿಯಾಗಲಾರೆ!
ನಿನ್ನ ದನಿಯೊಂದಿಗೆ ನನ್ನ ದನಿಯ ಸೇರಿಸಬಹುದಷ್ಟೆ!
ನಾನು ನಾನೇ, ನೀನು ನೀನೇ!

ನಿನ್ನಂದಕೆ ನನ್ನಂದವ ಲೇಪಿಸಲಾರೆ!
ನಿನ್ನುಸಿರಲಿ ನನ್ನುಸಿರನು ಸೇರಿಸಲಾರೆ,
ನಿನ್ನ ಬದುಕಲಿ ನಿನ್ನ ಜತೆಯಾಗಬಲ್ಲೆ!
ಜತೆಗಿದ್ದು ಕಷ್ಟ ಸುಖಗಳ ಹಂಚಿಕೊಳ್ಳಬಲ್ಲೆ!
ಆದರೆ ನಿನ್ನ ಕಷ್ಟಗಳ ನಾ ಪಡೆದು ನನ್ನ ಸುಖಗಳ ನಿನಗೀಯಲಾರೆ!
ನಾ-ನೀನೊಂದೆಯೆಂದರೂ ಕೂಡಾ
ನಾನು ನಾನೇ, ನೀನು ನೀನೇ..

ನೋವಲಿ ನಲಿವಲಿ ಜತೆಯಾಗಬಲ್ಲೆ!
ನಲ್ಲ ನಲ್ಲ ಎನಲು  ಬಲ್ಲೆ!
ನಾ ನಿನ್ನವನಲ್ಲ, ನೀ ನನ್ನವಳಲ್ಲ
ನೀನೇ ನಾನು ನಾನೇ ನೀನು ಹೇಗಾಗಬಲ್ಲೆ?
ನಾನು ನಾನೇ ನೀನು ನೀನೇ..
@ಪ್ರೇಮ್@
13.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ