ಶುಕ್ರವಾರ, ಸೆಪ್ಟೆಂಬರ್ 13, 2019

1218. ಮತ್ತಿನ ಬದುಕು

ಮತ್ತಿನ ಬದುಕು

ಮತ್ತಲಿ ಮುತ್ತಿನ ಹಾರವ ಬೇಡುವ
ಚಿತ್ತವ ಸೃಷ್ಠಿಸಿ ಕತ್ಲಲಿ ಜಾರಿದ,
ಬೆತ್ತದಿ ಹೊಡೆಯದೆ ನೆತ್ತರು ಬಾರದೆ
ಸತ್ತರು ಕಾಡುವ ಮೆತ್ತನೆ ನೋವದು//

ಬತ್ತದು ಮನದಲಿ ಸುತ್ತಲು ಜಗದಲಿ
ಮಿಥ್ಯದ ಗುಣವದು ಸತ್ಯಕೆ ದೂರವು!
ಕತ್ತೆಯ ದುಡಿತದ ಚಿತ್ತದ ಮನುಜನು!

ಪಥ್ಯವ ಮಾಡದ, ಕತ್ತಿಯ ನಡಿಗೆಯ
ಕಿತ್ತರು ಬಾಡದ ತತ್ತರ ಸಾಗುವ
ಮತ್ತಲಿ ಮೆರೆದ ಚಿತ್ತದ ವಾಂಛೆಯ
ಕತ್ತಿನ ಸರದಲಿ ಬತ್ತುವ ಬದುಕಿದು!

ಗತ್ತಿನ ಮಾನವ, ಹತ್ತಿಯ ತೂಕವು
ಹತ್ತರ  ಬದುಕಿನ ಭಿತ್ತಿಯ ಚಿತ್ರವು
ಅತ್ತೆಯ ಕಾಲವು ಎತ್ತಗೆ ಹೋಯಿತು?
ಇತ್ತಲು ಬಂದಿರೆ, ಮತ್ತದೆ  ಮತ್ತಲಿ..

ಮುತ್ತಿನ ಕಾಣಿಕೆ ಕಟ್ಟಿದ ರಥದಲಿ
ವೃತ್ತಿಯ ಸಹಜವು ಮಾಡಲು ಬರುವುದು!
ಎತ್ತಲು ನರಕವು ಶಕ್ತನು ಎತ್ತರ!
ಜೀವನ ಬೆತ್ತಲೆ  , ಸಹಜವು ಕತ್ತಲೆ!
@ಪ್ರೇಮ್@
14.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ