ಗುರುವಾರ, ಸೆಪ್ಟೆಂಬರ್ 12, 2019

1213. ನಾ ..ನೀ

ನಾ.. ನೀ..

ನಾನಾಗಿರಲು ನೀನಿರಬೇಕಲ್ಲ
ನಾನಿನ್ನನೇನನ್ನೆ ನೀನನ್ನನೇನನ್ನೆ?
ನೀನು ನಾನಾಗಿರಲು
ನಾನು ನೀನಾಗಿರಲು
ನಮ್ಮ ನೌಕೆಯದು
ನಾನಾ ಕಡೆ ಸಾಗುವುದು
ನವಿರು ನಾವಿಕರಾಗಿ
ನೂರಾರು ಆಸೆ ಹೊತ್ತು!
ನೆನಪ ಮೂಟೆಗಳ ಜೊತೆ
ನಂಟಿಗಂಟಿ ಬಾಳುತಲಿ
ನಮ್ಮಂತೆ ಇತರರಿರಲೆಂದು
ನಂಬಿಕೆಯ ಭರವಸೆಯಲಿ!
ನರರಾದ ನವಪಲ್ಲವಿಯಲಿ
ನಾನೂ ನೀನೂ ಸಾಗುತಲಿ..
ನನಗೆ ನೀನು, ನಿನಗೆ ನಾನು.
@ಪ್ರೇಮ್@
10.09.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ