ಗಝಲ್
ಪ್ರೀತಿ ತುಂಬಿಹುದು ನಿನ್ನೊಲವು
ನಕ್ಕು ನಗಿಸುವುದು ಚೆಲುವು!
ಮೈಮನ ಹಗುರಾಗಿಸಿಹುದು,
ತನು ಬೆಳಗಿಸಿಹುದು ನಲಿವು!
ಧರೆಯಲಿ ತರತರದ ಬದುಕಿಹುದು,
ಶಕ್ತಿಯ ಕೊಟ್ಟಿಹುದು ಬಲವು!
ಹನಿಯಂತೆ ಶಾಶ್ವತವಲ್ಲ ಬಾಳು,
ಖನಿಯಾಗಿಸಿ ಬೆಳೆಸಿಹುದು ನೋವು!
ವನದ ನಿಜ ಸೌಂದರ್ಯವಿಹುದು!
ಒಲುಮೆ ಜಲವುಕ್ಕಿಸಿಹುದು ಕಾವು!
ಮೌನದ ಬೆನ್ನ ಹಿಂದೋಡಿಹುದು!
ಮಾತ ಝಳಪಿಸಿಹುದು ಜೀವನವು!
ಪ್ರೇಮದ ಹೊಳೆಯನು ಹರಿಸಿಹುದು!
ಕಣ್ಮಣಿಯಂತಿಹುದು ಗೆಳೆತನವು!
@ಪ್ರೇಮ್@
20.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ