ಜುಟ್ಟು
ಪಟ್ಟು ಹಿಡಿದ ಪುಟ್ಟ ಕಿತ್ತ ನನ್ನ ತೆಳುವ ಜುಟ್ಟು!
ತಟ್ಟಲೆಂದು ಹೋದೆ ನಾನು ನನ್ನ ಗುಟ್ಟು ರಟ್ಟು!
ಬೋಳು ಮಂಡೆ ಇದ್ದ ನನಗೆ ಅಂಟಿಸಿತ್ತು ನಂಟು!
ಬಿಟ್ಟುಬಿಟ್ಟೆ ಅದರ ಚಾಳಿ ಹೋದ ಮೇಲೆ ಜುಟ್ಟು!
ಮರ
ಮರ ಕಡಿದವನೆಂದೂ ಆಗಲಾರ ಅಮರ
ಸರಸರ ಕಡಿವ ಕೊಡಲಿಯಾಗಿಹುದೆ ಅಮರ?
ಮನೆ ಮನದೊಳಗಿದೆ ಸದಾ ಒಳಗಿನ ಸಮರ!
ಕಮ್ಮಾರ ,ಚಮ್ಮಾರರೂ ಮರ ಕಡಿದೊಡೆ ಹರೋಹರ!!
@ಪ್ರೇಮ್@
19.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ