ಗುರುವಾರ, ಸೆಪ್ಟೆಂಬರ್ 12, 2019

1205.ಅಕ್ಕರೆಯ ಹನಿಗಳು

ಹನಿಗವನ

ಮಾತು

ಸಕ್ಕರೆಯಂಥ
ಮನದಲಿ
ಅಕ್ಕರೆಯ
ಮಾತಿರಲಿ,
ಬೆಕ್ಕಸ
ಬೆರಗಾಗಿ
ಕಿವಿಕೊಟ್ಟು
ಕೇಳುವಂತಿರಲಿ!!

2. ಪ್ರೀತಿ

ದುಂಬಿಯ
ಅಕ್ಕರೆಯ
ಸ್ನೇಹವದು
ಹೂವಿನ
ಮೇಲೆ!
ಮಧುವಿನ
ಕೊಡುಕೊಳ್ಳುವಿಕೆ
ಪ್ರೀತಿಯ
ಲೀಲೆ!!
@ಪ್ರೇಮ್@
30.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ