ಪುಟಿಯುತಲಿಹುದು....
ಪುಟಿಯುತಲಿದೆ ನವ ಕಾರಂಜಿ
ಸೋಲು ಗೆಲುವಿನ ಬೇಧವ ಮರೆತು
ಕಷ್ಟ ದುಃಖಗಳ ನೋವನು ಮರೆತು,
ಜನ ಮಾನಸಗಳ ನಡುವಿನಲಿ...ಪುಟಿಯುತಿದೆ..
ಜಾತಿ ಮತಗಳ ಕಟ್ಟೆಯ ಒಡೆದು
ಧರ್ಮದ ಗೋಡೆಯನು ಸಿಡಿಸಿ
ಮುಚ್ಚು ಮರೆ ಬಾಳಿಗೆ ಕಿಚ್ಚು ಹತ್ತಿಸಿ
ಶಾಂತಿಯ ಮನಕೆ ಉದಕವ ಬೆರೆಸಿ..ಪುಟಿಯುತಿದೆ
ಕೋಮುವಾದಗಳ ಬೇರು ಕಿತ್ತೊಗೆದು,
ನೆರೆಕರೆ ಜಗಳವ ಎಲ್ಲವ ಬಿಸುಟು,
ಮನೆ ಮನದೊಳಗೆ ಪ್ರೀತಿಯ ತುಂಬುತ,
ಸಕಲ ಜನರಲು ಕಾಂತಿಯ ಚಿಮ್ಮುತ.. .ಪುಟಿಯುತಿದೆ....
ಜಳಕವ ಮಾಡುತ ಕೊಳಕನು ಕಳೆದು
ಮನದ ಮೂಲೆಯನು ಪರಪರ ಕೆರೆದು,
ಭಾರತಿಯ ಭಾಗ್ಯವಂತರ ಒಂದೆಡೆ ಸೆಳೆದು,
ವಿನೀತ ಹೃದಯವ ಜೊತೆಯಲಿ ತಂದು.. ಪುಟಿಯುತಿದೆ..
@ಪ್ರೇಮ್@
14.09.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ