ಕುಡಿತವೂ ಹವ್ಯಾಸವೇ..
ನೀರ ಬಿಟ್ಟು ನೆಲದ ಮೇಲೆ
ದೋಣಿ ಸಾಗದು..
ಕುಡಿದು ಮುಗಿಸಿ ಇಟ್ಟ ಮೇಲೆ
ದೇಹ ಮಾತು ಕೇಳದು..
ಮುಂದೆ ತಾನು ಸಾಗದು..
ಹಿಂದೆ ನೆನಪ ಮರೆವುದು..
ಜೀವನ ಎಡರೋದು..
ವಕ್ರವಾಗಿಯೇ ನಡೆವುದು...
ಕುಡಿತವಿರದೆ ಕಾಲು ಎಂದೂ ನಡುಕವೂ..
ಕುಡಿತವನ್ನು ಬಿಟ್ಟು ಬಿಟ್ರೆ ಧನ ಅಧಿಕವೂ..
ಬಾಟ್ಲಿ ಬಿಡದು ನನ್ನ, ಹಣವು ಬರದು ಕೈಗೆ..
ಏನ್ಮಾಡೋದೂ..ನೈಂಟಿ ತಾಯಿಯೇ..
ಸಂಜೆ ಬರದೆ ಬಾರು ಎಂದೂ ಕಾಣದೂ..
ಹಗಲ ಸಮಯ ಕೆಲಸವೆಂದು ನಿಲ್ಲದೂ..
ಮನೆಯಲೆಂದು ಕುಡಿಯೆನು, ಗೆಳೆಯರೊಡನೆ ಕುಡಿವೆನು..
ಕುಡಿತವೂ ಹವ್ಯಾಸವೇ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ