*ನನ್ನ ಕವನಕ್ಕೆ ನೂರ್ ಅಹಮ್ಮದ್ ಸರ್ ಅವರ ಸುಂದರ ವಿಮರ್ಶೆ
ಗಜವದನನ ಬೇಸರ
ಆನೆಯ ಮೊಗದವ ಗಜವದನ
ಎನುವರು ನನಗೆ ಬೇಸರ ವದನ
ಡೊಳ್ಳೊಟ್ಟೆ, ಏಕದಂತನೆನುತಲಿ
ಕರೆವುದು ತರವೇ ಮೂದಲಿಸುತಲಿ?
ಸಂಕಟ ಬಂದಾಗ ಕರೆವರು ಎನ್ನನು
ಪ್ಲಾಸ್ಟಿಕ್ ಸಾಮಾನುಗಳಲೆ ಪ್ರಸಾದವ ಇಡುವನು,
ಮನುಜರ ಎಂದೂ ಕ್ಷಮಿಸಲಾರೆನು!
ಅಧೋಗತಿಯೆನಗೆ ಪೂಜೆಯು ಹೆಸರಿಗೆ!
ವರವನು ಕೊಡುವೆ, ಹರಸುತಲಿರುವೆ,
ಮನುಜನ ನೀಚ ಕಾರ್ಯಕೆ ಕಣ್ಣೀರಿಡುತಿರುವೆ!
ನನ್ನ ಮೇಲೆಯೇ ಜೋಕನು ಮಾಡುತ
ತ್ರಿಶೂಲಕೆ ನೂಡಲ್ಸನು ಸಿಗಿಸುತ!
ನನ್ನ ಬಕುತರೇ ನನ್ನ ನಗೆಪಾಟಲಾಗಿಸಿ,
ಮಕ್ಕಳ ಧಾರಾವಾಹಿಗೂ ನನ್ನನ್ನು ಅಣಕಿಸಿ,
ದೇಹದ ಆಕಾರ ಕರೆವುದು ಸರಿಯೇ,
ನಿಮ್ಮಯ ಶಿಕ್ಷಿಸದೆ ಬಿಡುವುದು ತರವೇ?
ಭಕ್ತಿಯ ಭಾವವು ಇಲ್ಲದೆ ಹೋಗಿ!
ತೆಗೆದಿಯ ಸೆಲ್ಫಿಯ ಹೆಸರಿಗಾಗಿ!
ತೋರಿಕೆ ಪೂಜೆಯು ನನಗೇಕಾಗಿ?
ನಿಜವಾದ ಬಕುತನ ಪೊರೆವೆನು ನಾನಾಗಿ!
@ಪ್ರೇಮ್@
02.09.2019
ನಮಸ್ತೆ*🙏
*ಪ್ರೇಮ್ ಜಿ*
*ಗಜವದನನ ಬೇಸರ*
*ಮನುಜನ ಬಯಲಾಟವನ್ನು ಬಯಲಿಗೆಳೆಯುವ ಬೇಸರದ ಕವನ ವಾಸ್ತವತೆಯನ್ನು ಮುಚ್ಚು ಮರೆಯಿಲ್ಲದೆ ಹೇಳಿರುವ ಕವಿಗೆ ಕಪಟನ ಕಾಣದು*
*ಇಲ್ಲಿ ಕವಿಯ ಮನಸು ಪ್ರಕೃತಿಯ ಜೊತೆಗೆ ನಿಕಟವಾದ ಸಂಬಂಧವನ್ನು ಹೊಂದುವಂತೆ ಕಾಣುತ್ತದೆ ಅದಕ್ಕೆ ಮನುಜನ ನಡತೆ ಸರಿ ಕಾಣಿಸುತ್ತಿಲ್ಲ ನಿಯಮಕ್ಕೆ ಮಾತ್ರ ಪೂಜೆ ಪುನಸ್ಕಾರಗಳು ಉಳಿದಂತೆ ಸ್ವಾರ್ಥವನ್ನು ಬೆಳೆಸಿದ್ದಾನೆ ಅದಕ್ಕೆ ಇಂದಿನ ಸರಕುಗಳನ್ನು ಪೂಣಿಸುವ ರೀತಿ ಆ ಗಣೇಶನಿಗೂ ಬೇಸರ ತಂದಿದೆ ಎನ್ನಿಸಿತ್ತಿದೆ*
*ಹಾಸ್ಯವಾಗಿ ಹೇಳುತ್ತಿದ್ದಾರೆಯೇ ಅಥವಾ ಸಂಕಟದಿಂದ ಮಾತನಾಡುತ್ತಿದ್ದಾರೆಯೇ ಗೊತ್ತಾಗುತ್ತಿಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಇದ್ದೆ ಇದೆ ಕಾರಣ ಆಕಾರವನ್ನು ಗೇಲಿ ಮಾಡುವ ಮನುಜರೆ ಇವತ್ತು ಪೂಜಿಸುತ್ತಿದ್ದಾರೆ ಅದಕ್ಕೆ ತಕ್ಕ ಶಿಕ್ಷೆಯಾಗಬೇಕು ಎನ್ನುವುದು ಕವಿಯ ವಾದ*
*ತನು ಮನದ ಪ್ರೀತಿ ಆದೇವನಲ್ಲಿ ಮೊರೆ ಇಟ್ಟರೆ ಭಕ್ತಿ ಭಾವವನ್ನು ಆತ್ಮಕ್ಕೆ ಸಂದಿಸಲಿ ಅದು ತೀರಿಕೆಯಾಗದಿರಲಿ ವಿಜೃಂಭಣೆಯಿಂದ ನಡೆಯದಿರಲಿ ಎನ್ನುವ ಕವಿ ಭಾವನೆಯನ್ನು ವ್ಯೆಕ್ತಪಡಿಸಿದ್ದಾರೆ*
*ಧನ್ಯವಾದಗಳು*
*ನೂರಅಹ್ಮದ ನಾಗನೂರ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ