❤️ಪ್ರೇಮಪತ್ರ❤️
ನನ್ನುಸಿರಿಗೆ......❤️
ಹೇ ನನ್ನ ಹುಡುಗಿ ನಿನ್ನ ನೀಳ ನಾಸಿಕವ ಮರೆಯಲೆಂತು ಜಾಣೆ?
ನಿನ್ನ ಬಳೆಯ ಸದ್ದಿನಲ್ಲಿ ನನ್ನ ನಾನು ಮರೆಯಲೇನೇ?
ಕೂದಲ ಆಘ್ರಾಣಿಸಿ, ಅಂದವ ಅನುಭವಿಸಿ ಸಂತೈಸಿಕೊಳ್ಳಲೇನೇ??
ನಿನ್ನೊಡಲ ಆಳಕಿಳಿದು ನನ್ನೆ ನಾನು ಹೃದಯದೊಳಗೆ ಬಿತ್ತಿಕೊಳ್ಳಲೇನು?
ನಿನ್ನೊಲವ ಮರದಲಿರುವ ಪೊಟರೆಯಲ್ಲಿ ಗೂಡು ಕಟ್ಟಿ ವಾಸ ಮಾಡಲೇನು?
ನಿನ್ನುಸಿರ ಗಾಳಿಯೊಳು ಗಾಳಿಯಾಗಿ ಒಳ ಸೇರಿಕೊಳ್ಳಲೇನು?
ಚೆಲುವೆ ನೀನುಡುವ ಬಟ್ಟೆಯಾಗಿ ನಿನ್ನ ಮೈಯ ಸುತ್ತಿಕೊಳ್ಳಲೇನು?
ನನ್ನ ಕೈಬೆರಳಿನ ಸಂಧಿಯನು ನಿನ್ನ ಬೆರಳಿನೊಡನೆ ತುಂಬಿಕೊಳ್ಳಲೇನು?
ಬಿಳಿಯ ಮೋಡ ತಂದು ನಿನಗೆ ಪೌಡರಾಗಿ ಹಚ್ಚಿ ಸೌಂದರ್ಯವ ಹೆಚ್ಚಿಸಲೇನು?
ಕಾಮನಬಿಲ್ಲನೆಳೆದು ತಂದು ನಿನ್ನ ಸೊಂಟ ಪಟ್ಟಿಯಾಗಿ ಸಿಂಗರಿಸಲೇನು?
ತಾರೆಗಳ ಹೆಕ್ಕಿ ತಂದು ಜಡೆಗೆ ಮುಡಿಸಿ ಅಂದ ನೋಡಲೇನು?
ಸಂಪಿಗೆಯಂಥ ಮೂಗಿನಂದಕೆ ಸೂರ್ಯನ ತಂದು ನತ್ತು ಮಾಡಲೇನು?
ದಾಳಿಂಬೆಯಂತೆ ಹೊಳೆವ ಹಲ್ಲಿನಂದಕೆ ಅರ್ಧ ಚಂದಿರನ ಜೋಡಿಸಿ ನಗೆಯಂದ ಕಾಪಾಡಲೇನು?
ಮೌನ ಮುರಿದು ಮಾತನಾಡೆ ಇಂಪು ಕೋಗಿಲೆ ದನಿಯ ಜೋಡಿಸಲೇನು?
ಬೆಂಡೆಯಂಥ ಬೆರಳುಗಳಿಗೆ ವಜ್ರದುಂಗುರವ ತೊಡಿಸಲೇನು?
ಮತ್ತಿನಲ್ಲೆ ಮುತ್ತ ಬೆರೆಸಿ ಸಿಂಗರಿಸುತ ಮೈ ಮರೆಯಲೇನು?
ಸಂಜೆ ಸಂಧ್ಯಳನ್ನೆ ಕರೆಸಿ ನಿನಗಾರತಿಯನು ಬೆಳಗಲೇನು?
ಬಾರೆ ನನ್ನ ಅರಗಿಣಿ, ಮುದ್ದು ನಲ್ಲೆ ಕಟ್ಟಲಿರುವೆ ಕರಿಮಣಿ
ಸೇರೆ ಇಂದೆ ದಿನಮಣಿ, ಓಡ ಬೇಡ ದೂರ ಮಂಜಿನ ಹನಿ..
❤️@ಪ್ರೇಮ್@❤️
15.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ