ಪ್ರೇಮಪತ್ರ
ಬರೆದೆನೊಂದು ಪ್ರೇಮಪತ್ರ
ಮರೆತು ಬಿಟ್ಟೆ ಮೇಜಿನ ಹತ್ರ
ಓದಿಬಿಟ್ಳು ಗೆಳತಿ ನೇತ್ರ
ಹೇಳಿ ಬಿಟ್ಳು ಎಲ್ಲಾರ್ ಹತ್ರ
ಗೆಳೆಯರೆಲ್ಲ ಕೊಟ್ರು ಉತ್ರ
ಗೆಳತಿ ಹೆಸರ ಕಂಡ್ಹಿಡಿದು ಬಿಟ್ರ
ಅಮ್ಮನಿಗೆ ತಿಳಿಸೋಕೆ ಹೋದ್ರ
ಅಲ್ಲಿ ಅಪ್ಪ ಎದುರು ಸಿಕ್ರ
ಆಗಿಬಿಟ್ಟೆ ನಾನು ಬಕ್ರ
ಕೇಳ್ರಿ ಎಲ್ಲ ತಿಳಿಯ ಬೇಕ್ರ
ಪ್ರೇಮ ಪತ್ರ ಬರೆದು ಬಿಟ್ರ
ಬರೆದ ಕೂಡ್ಲೆ ಕೊಡ್ಲೆ ಬೇಕ್ರ
ಇಲ್ಲಾ ಅಂದ್ರೆ ಆಗೋದು ನಕ್ರ
ಸಿಕ್ಕಾಕೊಳೋದ್ ಮನೆಯವ್ರ ಹತ್ರ
ಬೇಡ ಸಹವಾಸ ಬರೆಯೊ ಪತ್ರ
ನೇರವಾಗಿ ಹೋಗಿ ಹುಡುಗಿ ಹತ್ರ
ಹೇಳಿ ಬಿಡ್ರಿ ಮನಸ ಮಾತ ಅವಳ್ಹತ್ರ!
ಒಪ್ಪಿಕೊಂಡ್ರೆ ಖುಷಿಯು ಮಾತ್ರ
ಇಲ್ಲಾಂದ್ರೆ ನೋಡಿ ಚಪ್ಲಿ ಗಾತ್ರ!
ಬೇಕಾ ಪತ್ರ ಬರೆಯೊ ಶಾಸ್ತ್ರ?
ಆದ್ರೂ ಬಿಡರು ಬರೆಯೋದ್ ಮಾತ್ರ
ಮೆಸೇಜ್ ಇಮೇಲ್ ಇಲ್ವೆ ಹತ್ರ?
ಹಾಕಿ ಮಾಡಿ ಮತ್ತೊಮ್ಮೆ ಸ್ತೋತ್ರ!
ಗೆದ್ದು ಬಿಟ್ರೆ ಮಾಡೋಣ ಮದುವೆ ಶಾಸ್ತ್ರ..
@ಪ್ರೇಮ್@
14.12.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ