ಸೋಮವಾರ, ಜುಲೈ 30, 2018

400. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-6

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-6

ನಮ್ಮ ಮನೇಲಿ ಕರೆಂಟ್ ಇಲ್ಲದಿದ್ದರೆ ನಾವು ಕೆಇಬಿಗೆ ಫೋನ್ ಮಾಡುವುದಿಲ್ಲ, ಬದಲಾಗಿ ಪಕ್ಕದ ಮನೆಯವರ ಫ್ಯೂಸ್ನಲ್ಲಿ ಇಣುಕಿ ನೋಡಿ ಅವರಿಗೂ ಕತ್ತಲೆಯಿದ್ದರೆ ಸಮಾಧಾನ ನಮಗೆ..

  ಮೇಲ್ನೋಟಕ್ಕೆ ಇದು ಜೋಕ್ಸ್ ಅನಿಸಿದರೂ ಇದು ಸೀರಿಯಸ್ ವಿಷಯ. ಒಂದು ನಾವು ನಮ್ಮ ಜೀವನಕ್ಕಿಂತ ಹೆಚ್ಚಾಗಿ ಬೇರೆಯವರ ಜೀವನ ವಿಧಾನ, ಶೈಲಿಯ ಮೇಲೆ ನಮ್ಮ ಆಸಕ್ತಿ ಜಾಸ್ತಿ! ನಮ್ಮ ಮನೆಯ ಕಾವಲಿಯೇ ತೂತಾಗಿದ್ದರೂ ಇತರರ ಮನೆಯ ತೂತಾದ ದೋಸೆಯನ್ನು ಎತ್ತಿ ತೋರಿಸಿ ಆಡಿಕೊಳ್ಳುವವರು ನಾವು.. ನಮ್ಮ ಈ ಗುಣವೇ ಟಿವಿಯ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಗೆ ಬಂಡವಾಳ! ಪ್ರತಿಯೊಬ್ಬರಿಗೂ ಇತರರ ಬಗ್ಗೆ ಆಸಕ್ತಿ!!

  ನಮ್ಮ ಜೀವನದಲ್ಲೆ ಸಾಧಿಸಬೇಕಾದ ಹಲವಾರು ಕೆಲಸಗಳಿವೆ. ಸಾಧಿಸಲಾಗದು. ಜೀವನ ಒತ್ತಡದ ಗೂಡಾಗಿದೆ.ನಡೆಸಲಾಗದು.. ನಾವೂ ಒತ್ತಡಗಳಿಂದ ಒದ್ದಾಡುತ್ತಿರುವುದಲ್ಲದೆ, ನಮ್ಮ ಮಕ್ಕಳ ಪುಟ್ಟ ಹೃದಯ, ಮನಸ್ಸಿಗೂ ಅದನ್ನೆ ಬಿತ್ತುತ್ತೇವೆ. ಜೀವವನ್ನೇ ಪಣವೊಡ್ಡಿ ಬದುಕಲು ಕಲಿಸುತ್ತೇವೆ!
  ಅಷ್ಟೇಕೆ ..ನಮ್ಮ ಒತ್ತಡ, ಕೋಪೋದ್ರೇಕಕ್ಕೆ ಒಳಗಾಗುವವರು ಪೆಟ್ಟು ತಿನ್ನುವವರು ಹೆಂಡತಿ,ಮಕ್ಕಳು, ನಾವು ಸಾಕಿದ ಪ್ರೀತಿಯ ಪ್ರಾಣಿಗಳು! ಮೊಬೈಲ್ ನಮ್ಮ ದೇವರು.. ಅಲ್ಲಿರುವ ಸಂದೇಶಗಳು ನಮ್ಮ ಮಂತ್ರ! ಮೇಲಿನ ದೇವರು ನಮ್ಮನ್ನು ಕರೆಯುವವರೆಗೆ ನಾವು ಈ ದೇವರ ಧ್ಯಾನದಲ್ಲೆ ಇರುತ್ತೇವೆ!

  ಬರ್ತ್ಡೇ ಆಚರಣೆಗೆ,ವಿದೇಶ ಪ್ರವಾಸಕ್ಕೆ,ಸತ್ತರೂ ವಿಶ್ ಸಾಮಾಜಿಕ ಜಾಲ ತಾಣಗಳಲ್ಲೇ... ನಮ್ಮ ಜೀವನದ ಬಗ್ಗೆ ಯೋಚನೆ ಮಾಡುತ್ತಾ, ನಮ್ಮನ್ನು ನಾವು ಮುಂದೆ ಸಾಗಿಸುತ್ತಾ ಆನಂದದಿಂದ ಬದುಕೋಣ! ಪರರ ಚಿಂತೆ ನಮಗೇಕೆ ಅಲ್ಲವೇ? ಸಾಧ್ಯವಾದರೆ ಒಂದಿಷ್ಟು ಸಹಾಯ ಮಾಡೋಣ, ಇಲ್ಲದಿದ್ದರೆ ಸುಮ್ಮನಿದ್ದುಬಿಡೋಣ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ