ನ್ಯಾನೋ ಕತೆ
ಪವಿತ್ರ ಪ್ರೇಮ
ಸಾಮಾಜಿಕ ಜಾಲ ತಾಣದಲ್ಲಿ ದಿನಾಲೂ ಮನಸ್ವ್ವಿಯ ಫೋಟೋ ನೋಡುತ್ತಿದ್ದ ಆ ಯುವಕ ವಂದನ್ ತನಗೆ ಗೊತ್ತಿಲ್ಲದೆ ಆಕೆಯನ್ನು ಪ್ರೇಮಿಸತೊಡಗಿದ. ಅಮಾಯಕಳಾದ ಮನಸ್ವಿಗದನ್ನು ತಿಳಿಸಲೇ ಇಲ್ಲ. ಒಂದು ದಿನ ಗೆಳೆತನದ ಮಾತನಾಡಿ ಅಧಿಕಾರಯುತವಾಗಿ ಅವಳ ಮನೆಗೆ ನುಗ್ಗಿ ತನ್ನ ಮನದಲಿರುವುದು ಪ್ರೇಮವಲ್ಲ, ಕಾಮ ಎಂಬುದನು ಸಾಬೀತುಪಡಿಸಿ ಬಿಟ್ಟ. ಅಬಲೆ ಮನಸ್ವಿ ಸಹಕರಿಸುವುದ ಬಿಟ್ಟು ಮತ್ತೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅಳುತ್ತಾ ತನ್ನ ಬಾಳಿಗಾಗಿ ಶಪಿಸಿದಳು. ದೇವರು ಅವಳ ಬಾಳಿಗೆ ಕತ್ತಲಾಗದೆ ಪ್ರೀತಿಯ ಗುಚ್ಛವಾಗಿ ದರ್ಶನ್ ನನ್ನು ನೀಡಿದ. ನಿಜ ತಿಳಿದರೂ ದರ್ಶನ್ ಮಾನಸಿಕ ಪ್ರೀತಿಯೆದುರು ಅದು ಶೂನ್ಯವೆನುತ ಬಾಳಿಗಡಿಯಿಟ್ಟು ಜೈಸಿದ.
@ಪ್ರೇಮ್@
19.06.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ