ಭಾನುವಾರ, ಜನವರಿ 31, 2021
ಪಂಜು ಪ್ರೇಮಪತ್ರ ಸ್ಪರ್ಧೆಗೆ
ಶುಕ್ರವಾರ, ಜನವರಿ 29, 2021
2020 ಅವಲೋಕನ
ಶಾಯರಿಗಳು
ಆಪ್ತ ರಕ್ಷಕ
ಮ ಕಾರ ದಲಿ...
ತ್ರಿಪದಿಗಳು
ಕುಸುಮ
ವಚನ
2ರುಬಾಯಿಗಳು
ಇನಿಯ
ಚುಟುಕು
ಹನಿಗವನ
ರುಬಾಯಿ
ಚುಟುಕು
ಗಕಾರ
ವಚನ
ಭಾವ
ಸಿಂಕೇನ್ ಕವನ
ಶಾಯರಿಗಳು
ಸುಗ್ಗಿಪದ
ಭಕ್ತಿಗೀತೆ -ಜೈಜೈ ವಿಠಲ
ಗಝಲ್
ಪದಮಾಲಿಕೆ-ಸು
ಶನಿವಾರ, ಜನವರಿ 16, 2021
About me
ಹೆಸರು-ಪ್ರೇಮಾ ಉದಯ್ ಕುಮಾರ್
ಉದ್ಯೋಗ-ಆಂಗ್ಲ ಭಾಷಾ ಶಿಕ್ಷಕರು
ಕಾವ್ಯನಾಮ-@ಪ್ರೇಮ್@
ವಿದ್ಯಾರ್ಹತೆ-ಎಂ.ಎ ಕನ್ನಡ ಮತ್ತು ಇಂಗ್ಲಿಷ್, ಬಿ.ಎಡ್.
ಸ್ವಂತ ವಿಳಾಸ- ,w/o ಉದಯ್ ಕುಮಾರ್ ಡಿ.ಬಿ.
ದೇವನ್ ಗೂಲ್,
ಕೊಟ್ಟಿಗೆಹಾರ ಪೋಸ್ಟ್,
ಬಣಕಲ್ ವಯಾ,
ಮೂಡಿಗೆರೆ ತಾಲೂಕು
ಚಿಕ್ಕಮಗಳೂರು ಜಿಲ್ಲೆ. 577113
ಹವ್ಯಾಸ-ಬರವಣಿಗೆ, ಚಿತ್ರಕಲೆ,ಓದುವುದು, ಟೈಲರಿಂಗ್,ಎಂಬ್ರಾಯಿಡರಿ, ಹಾಡುವುದು, ಬರಹ, ಹಾಡು ಕೇಳುವುದು.ಮೋಟಿವೇಶನ್.ಕಸದಿಂದ ರಸ ತಯಾರಿಕೆ.
ಬರವಣಿಗೆ- ಪ್ರೇಮ್ಸ್ ಲಿಟರೇಚರ್ ಎಂಬ ಬ್ಲಾಗ್ ನಲ್ಲಿ 1000 ಕ್ಕೂ ಅಧಿಕ ಕವನ, ಹನಿಗವನ, ಭಾವಗೀತೆ, ಗಝಲ್, ಇನಿಗವನ, ಚುಟುಕು, ಶಾಯರಿ, ಹಾಯ್ಕು ಮೊದಲಾದ ಪ್ರಕಾರಗಳಲ್ಲಿ ಬರೆದಿರುವೆ. 100ರಷ್ಟು ಲೇಖನಗಳಿವೆ.
ನಮ್ಮ ಬಂಟ್ವಾಳ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಎಂಬ ಸಾಮಾಜಿಕ ಕಳಕಳಿಯ ಅಂಕಣ 60 ವಾರಗಳಿಂದ ಪ್ರಕಟವಾಗುತ್ತಿದೆ. ಈ ಮೊದಲು 2008ರಿಂದ ಮೂರು ವರುಷಗಳ ಕಾಲ ಇದೇ ಅಂಕಣ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು, 6 ತಿಂಗಳುಗಳ ಕಾಲ ಇದೇ ಪತ್ರಿಕೆಯಲ್ಲಿ 'ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ' ಎಂಬ ಅಂಕಣ ಪ್ರಕಟವಾಗಿದೆ.
ಕೃತಿ ಪ್ರಕಟಣೆ- ಭಾವ ಜೀವದ ಯಾನ
ಕವನ ಸಂಕಲನ
ಗವಿಯಡವಿಯ ಗಝಲ್ ಗಳು ಎಂಬ 50 ಗಝಲ್ ಗಳನ್ನು ಒಳಗೊಂಡ ಪುಸ್ತಕ ಹಾಗೂ ಶಿವ ಭಕ್ತಿ ಲೀಲಾಮೃತ ಎಂಬ ಭಕ್ತಿ ಗೀತೆಗಳ ಸಂಕಲನ ಪ್ರಕಟಣೆಗೆ ಸಿದ್ಧವಾಗಿವೆ.
ದಿನಾಂಕ 10.12.1980 ರಲ್ಲಿ ದಿ. ಶ್ರೀಯುತ ರಮೇಶ್ ಶೆಟ್ಟಿ ಮತ್ತು ಶ್ರೀಮತಿ ಗುಲಾಬಿ ಶೆಟ್ಟಿ ಇವರಿಗೆ ಮೊದಲನೆ ಮಗಳಾಗಿ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜನನ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಈದು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇಲ್ಲಿ ಪಡೆದುದು.
ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸ.ಪ.ಪೂ.ಕಾಲೇಜು, ಕುದುರೆಮುಖ ಚಿಕ್ಕಮಗಳೂರು ಜಿಲ್ಲೆ ಇಲ್ಲಿ ಪಡೆದೆ.
ಮುಂದೆ ಕಾಲೇಜು ಶಿಕ್ಷಣ ವಿಜ್ಞಾನ ವಿಷಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಇಲ್ಲಿ ನಡೆಯಿತು. ತದನಂತರ ಮೈಸೂರಿನ ಮಹಾರಾಣಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಿ. ಎಡ್ . ಟ್ರೈನಿಂಗ್ ಪಡೆದು ದೀಪಾ ಶಿಕ್ಷಣ ಸಂಸ್ಥೆ ದೀಪಾನಗರ ಮೈಸೂರು ಇಲ್ಲಿ ವೃತ್ತಿ ಜೀವನ ಪ್ರಾರಂಭ.
ತದನಂತರ 2004 ರ ಮಾರ್ಚ್ 10 ರಂದು ಸ.ಹಿ.ಪ್ರಾ.ಶಾಲೆ ಉಳಿಬೈಲು, ಬಂಟ್ವಾಳ ತಾಲೂಕು ದ.ಕ ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಲ್ಪಟ್ಟು, ಅಲ್ಲೇ ನಮ್ಮ ಬಂಟ್ವಾಳ ವಾರ ಪತ್ರಿಕೆಯಲ್ಲಿ "ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ " ಅಂಕಣ ಬರಹ ಪ್ರಾರಂಭ.
ಇಂದಿರಾಗಾಂಧಿ ಮುಕ್ತ ವಿಶ್ವ ವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಬಿ.ಎ, ಆಂಗ್ಲ ಭಾಷಾ ಭೋಧನಾ ಸರ್ಟಿಫಿಕೇಟ್, ಹಾಗೂ ಬಿ. ಎಡ್ ಪದವಿ ಕಲಿಕೆ.
ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪ್ರಥಮ ಶ್ರೇಣಿಯಲ್ಲಿ ಪೂರ್ಣ.
2011ರಲ್ಲಿ ಸ.ಪ.ಪೂ.ಕಾಲೇಜು ಐವರ್ನಾಡು ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ಆಂಗ್ಲ ಭಾಷಾ ಶಿಕ್ಷಕಿಯಾಗಿ ಪದೋನ್ನತಿ ಹೊಂದಿ ಇದುವರೆಗೆ ವೃತ್ತಿ ಬದುಕಿನ ಹದಿನೈದು ವರುಷಗಳನ್ನು ಪೂರೈಸಿದ ಸಂತಸ.
2011ರಲ್ಲಿ ಉದಯ್ ಕುಮಾರ್ ರವರೊಡನೆ ದಾಂಪತ್ಯ ಜೀವನ ಪ್ರಾರಂಭ. ದಿಯಾ ಉದಯ್ ಎಂಬ ಹೆಸರಿನ ಆರುಾವರೆ ವರುಷದ ಮಗಳಿದ್ದಾಳೆ.
ಪ್ರಸ್ತುತ ಅದೇ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಸುಳ್ಯ,ದ.ಕ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಭಾಷಾ ಬೋಧನೆ . ಎಂಟು ವರುಷಗಳಿಂದ ಶೇ. 90 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿ ವರ್ಷ ಆಂಗ್ಲ ಭಾಷೆಯಲ್ಲಿ ಉತ್ತೀರ್ಣತೆಯ ಸಾಧನೆ.
2016-17ರಲ್ಲಿ ಶೇ. 100 ಆಂಗ್ಲ ಭಾಷೆಯಲ್ಲಿ ಫಲಿತಾಂಶದ ಸಾಧನೆ.
ಕಾವ್ಯನಾಮ-@ಪ್ರೇಮ್@
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವ ಹೆಮ್ಮೆಯಿದೆ.
ಹಿಮಾಲಿ ಎಂ.ಪಿ. ಎಂಬ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಹಾಗೂ ಅದೇ ವಿದ್ಯಾರ್ಥಿನಿ ಬರೆದ 50 ಕವನಗಳ ಕವನಸಂಕಲನವನ್ನು ಪ್ರಕಟಿಸಿ, ಸುವಿಚಾರ ಸಾಹಿತ್ಯ ವೇದಿಕೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ.
ಕನ್ನಡ, ತುಳು, ಅರೆಭಾಷೆ, ಮಳಯಾಳಂ, ತಮಿಳು ಹಿಂದಿ ಹಾಗೂ ಆಂಗ್ಲ ಭಾಷೆಗಳಲ್ಲಿ ಕತೆ, ಕವನ ಹಾಗೂ ಬರವಣಿಗೆಯ ವಿವಿಧ ಮಜಲುಗಳಲ್ಲಿ ವಿದ್ಯಾರ್ಥಿಗಳನ್ನು ಬರೆಯಲು, ಹಾಗೂ ವಿವಿಧ ರೀತಿಯ ಡ್ರಾಯಿಂಗ್ ಕಲೆ ಹಾಗೂ ಕ್ರಾಫ್ಟ್ ಕಲೆಗಳನ್ನು ರಚಿಸಲು ಪ್ರೋತ್ಸಾಹಿಸಿದ ಪರಿಣಾಮವಾಗಿ ನಾನೂ ಸಹ ಸಂಪಾದಕಳಾಗಿದ್ದ ನಮ್ಮ ಶಾಲಾ ವಾರ್ಷಿಕ ಹಸ್ತಪ್ರತಿ ಸಂಚಿಕೆ "ಐಸಿರಿ" ಗೆ ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಹಸ್ತಪ್ರತಿ ಸಂಚಿಕೆ ಸ್ಪರ್ಧೆಯಲ್ಲಿ (ಅಟ್ಲೂರು) ಸತತ ಎರಡು ವರುಷ ಪ್ರಥಮ ಬಹುಮಾನ ಲಭಿಸಿದೆ. (2017.2018) ಮತ್ತೊಂದು ವರುಷ (2016)ದ್ವಿತೀಯ ಬಹುಮಾನ ದೊರೆತಿದೆ.
2019ರ ರಾಜ್ಯ ಮಟ್ಟದ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನ ಮನುಬಳಿಗಾರ್ ರವರ ನೇತೃತ್ವದಲ್ಲಿ, ಸುಧಾ ಮೂರ್ತಿಯವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರಿನಲ್ಲಿ ನಡೆದಾಗ ಅದರ ಒಂದು ಗೋಷ್ಟಿ "ಕನ್ನಡ ಸಾಹಿತ್ಯ ಮಹಿಳಾ ನೋಟ" ಕಾರ್ಯಕ್ರಮದ ನಿರೂಪಣೆ ನಡೆಸಿಕೊಡುವ ಅವಕಾಶ ಒದಗಿ ಬಂದಿತ್ತು.
ಮೊದಲ ಕೃತಿ ಪ್ರಕಟಣೆ- ಭಾವ ಜೀವದ ಯಾನ, ಭಾವನೆ ಮತ್ತು ಬದುಕಿನ ನಡುವೆ ಸಮ್ಮಿಲನ ಎಂಬ
ಕವನ ಸಂಕಲನ 2019 ಜನವರಿ 18ಕ್ಕೆ ಚಿಕ್ಕಮಗಳೂರು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ , ಮೂಡಿಗೆರೆಯಲ್ಲಿ ಬಿಡುಗಡೆ. ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಂದೂರು ಅಶೋಕ್ ರವರ ಬೆನ್ನುಡಿಯೊಂದಿಗೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರಿಂದ.
ನವಿಲುಗರಿಯ ಬಣ್ಣಗಳು, ಭಾವದೀಪ್ತಿ, ಹಬ್ಬಿದಾ ಮಲೆ ಮಧ್ಯದೊಳಗೆ, ಭಾವ ಸಂಗಮ ಮೊದಲಾದ ಹಲವಾರು ಸಂಪಾದಿತ ಕವನ ಸಂಕಲನ ಹಾಗೂ ಕಥಾ ಸಂಕಲನ ಪುಸ್ತಕಗಳಲ್ಲಿ ನನ್ನ ಕತೆ,ಕವನ ಪ್ರಕಟಗೊಂಡಿದೆ.
ನೈಋತ್ಯ, ಪಂಜು, ನಮ್ಮ ಬಂಟ್ವಾಳ, ಸ್ತ್ರೀ ಜಾಗೃತಿ, ಮಂಗಳ, ವಿಜಯವಾಣಿ , ಉದಯವಾಣಿ, ಮೊದಲಾದ ಪತ್ರಿಕೆಗಳಲ್ಲೂ , ಹಲವಾರು ಸಂಘ ಸಂಸ್ಥೆಗಳ ವಾರ್ಷಿಕ ಸಂಚಿಕೆಗಳಲ್ಲಿ ಲಘುಬರಹ, ಲೇಖನ, ಕವನಗಳು ಪ್ರಕಟಗೊಂಡಿವೆ.
ಪ್ರೇಮ್ಸ್ ಲಿಟರೇಚರ್ ಎಂಬ ಬ್ಲಾಗ್ ನಲ್ಲಿ 1000ಕ್ಕೂ ಹೆಚ್ಚು ಕವನ, ಅಂಕಣ ಬರಹ, ಕತೆ, ಗಝಲ್,ನ್ಯಾನೋಕತೆ, ವಿಮರ್ಶೆಗಳು, ಬರವಣಿಗೆಗಳು ತುಳು, ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿವೆ.
ಪ್ರತಿಲಿಪಿ, ವರ್ಡ್ ಪ್ರೆಸ್, ಕನ್ನಡ ಪೋಯಮ್ಸ್ ಆ್ಯಪ್ ಗಳಲ್ಲಿ ಕತೆ, ಕವನಗಳು ಪ್ರಕಟಗೊಳ್ಳುತ್ತಿವೆ.ಕನ್ನಡದ 7,000 ಬರಹಗಾರರಲ್ಲಿ ಪ್ರತಿಲಿಪಿಯಲ್ಲಿ 101ನೇ ಸ್ಥಾನದಲ್ಲಿದ್ದು, 6,500 ಓದುಗರಿರುವರು.
15-20 ರಾಜ್ಯ, ಅಂತರರಾಜ್ಯ, ಜಿಲ್ಲಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವೆ. ರಾಷ್ಟ್ರ ಮಟ್ಟದಲ್ಲಿ ಕೇರಳದಲ್ಲಿ ಹಾಗೂ ಬಂಟ್ವಾಳ ತಾಲೂಕು ಮಟ್ಟದಲ್ಲಿ ಆಂಗ್ಲ ಭಾಷಾ ವಿಶೇಷ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿರುವೆ. ಪ್ರಸ್ತುತ ಶಾಲೆಯಲ್ಲೂ ಸ್ಪೋಕನ್ ಇಂಗ್ಲಿಷನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವೆ. ಹಲವಾರು ಆಂಗ್ಲ ಭಾಷಾ ತರಬೇತಿಗಳಲ್ಲಿ ಭಾಗವಹಿಸಿದ ಅನುಭವವಿದೆ.
ಉತ್ತರಾಕಾಂಡ ರಾಜ್ಯದಲ್ಲಿ ಸಿಸಿಆರ್ಟಿ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದಾಗ ಮತ್ತು ಕೇರಳದ ಅರಿಕೋಡ್ ನಲ್ಲಿ ಎದು ಫೆಸ್ಟ್ ನಲ್ಲಿ ಮತ್ತು ಕೊಡಗಿನ ಪೆರಾಜೆ ಶಾಲೆಯಲ್ಲಿ ನಡೆದ ಸಿಸಿಆರ್ ಟಿ ಎದುಫೆಸ್ಟ್ ನಲ್ಲಿ ಆಂಗ್ಲ ಭಾಷಾ ವಿಶೇಷ ತರಗತಿಗಳನ್ನು ನೀಡಿ ಸನ್ಮಾನಿಸಲ್ಪಟ್ಟಿರುವೆ.
ಪ್ರಶಸ್ತಿಗಳು- ಸ್ನೇಹ ಸಂಗಮ ಕವಿಗಳ ಬಳಗ ತುಮಕೂರು ಇವರು ಕೊಡಮಾಡುವ ರಾಜ್ಯಮಟ್ಟದ ಕಾವ್ಯ ರತ್ನ ಪ್ರಶಸ್ತಿ, ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ನಿಂದ ಕೊಡಮಾಡುವ ರಾಜ್ಯ ಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಭಾಜನ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಜ್ಞಾನ ಶಿಕ್ಷಕರಿಗಾಗಿ ನಡೆಸುವ ವಿಜ್ಞಾನ ವಿಚಾರ ಗೋಷ್ಟಿಯಲ್ಲಿ ಮೂರು ಬಾರಿ ಜಿಲ್ಲಾ ಮಟ್ಟಕ್ಕೂ , ಒಂದು ಬಾರಿ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿರುತ್ತೇನೆ. ತಾಲೂಕು ಮಟ್ಟದ ರಸಪ್ರಶ್ನೆ, ಪಿಕ್ ಆಂಡ್ ಸ್ಪೀಚ್ ಸ್ಪರ್ಧೆಗಳಲ್ಲೂ, ರಾಜ್ಯ ಅಂತರ ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆಗಳಲ್ಲೂ ನನ್ನ ಕವನಗಳು ಮೆಚ್ಚುಗೆ ಗಳಿಸಿವೆ. ಬಹುಮಾನಗಳನ್ನು ಗಳಿಸಿ ಕೊಟ್ಟಿವೆ.
" ಮಹಿಳಾ ಕವಿರತ್ನಗಳು" ಎಂಬ ವಾಟ್ಸಪ್ ಗುಂಪಿನ ಮೂಲಕ ಹಲವಾರು ಸ್ಪರ್ಧೆಗಳನ್ನು ಆಗಾಗ ನಡೆಸಿ, ಪುಸ್ತಕ ಬಹುಮಾನಗಳನ್ನು ಕಳುಹಿಸಿ, ಕವಿಗಳನ್ನು ಉತ್ತೇಜನ ಹಾಗೂ ಬರವಣಿಗೆಗೆ ಪ್ರೋತ್ಸಾಹಿಸಲಾಗುತ್ತಿದೆ. "ಲೇಡೀಸ್ ಗ್ಯಾಲರಿ" ಎಂಬ ಮಹಿಳೆಯರೇ ಇರುವ ವಾಟ್ಸಪ್ ಗುಂಪಿನ ಮೂಲಕ ಕಳೆದ 5 ವರುಷಗಳಿಂದ ಮಹಿಳೆಯರ ಹಲವಾರು ಸಮಸ್ಯೆಗಳನ್ನು ಸಮಾಜದ ವಿವಿಧ ಸ್ತರಗಳಲ್ಲಿರುವ ಮಹಿಳೆಯರಿಂದಲೇ ಬಗೆಹರಿಸಲಾಗುತ್ತಿದೆ.
"ಫ್ರೆಂಡ್ಸ್ ಫಾರೆವರ್ ಅಟ್ ಗುಡ್ ಐಡಿಯಾಸ್" ಎಂಬ ಗುಂಪನ್ನು ಹುಟ್ಟು ಹಾಕಿ ಕಳೆದ 5 ವರುಷಗಳಿಂದ ಆ ಮೂಲಕ ಪ್ರತಿನಿತ್ಯದ ಸ್ಥಳೀಯ, ಜಿಲ್ಲಾ, ರಾಜ್ಯ, ರಾಷ್ಟ್ರಗಳ ವಾರ್ತೆಗಳನ್ನು ಪ್ರತಿನಿತ್ಯ ಹಂಚಿ ವಿನಿಮಯ ಮಾಡಿಕೊಳ್ಳುತ್ತಾ ಜ್ಞಾನವನ್ನು ವೃದ್ಧಿಸಲಾಗುತ್ತಿದೆ.
"ಟೀಚರ್ ಲರ್ನರ್ಸ್" ಎಂಬ ವಾಟ್ಸಪ್ ಗುಂಪಿನ ಮೂಲಕ 2014 ನವೆಂಬರ್ ನಿಂದ ಶಿಕ್ಷಕರಿಗೆ ವಾರ್ತೆ, ಮಾಹಿತಿ, ಚರ್ಚೆ, ಸಮಸ್ಯೆ ಪರಿಹರಿಸಿಕೊಳ್ಳುವಿಕೆ, ವಿಷಯದ ತಿಳುವಳಿಕೆ ಹಂಚಿಕೊಳ್ಳುವುದರ ಜೊತೆಗೆ, ಶಿಕ್ಷಕರ ಸಾಮಾನ್ಯ ಜ್ಞಾನಾಭಿವೃದ್ಧಿಯ ಕಾರ್ಯವನ್ನೂ ಮಾಡಲಾಗುತ್ತಿದೆ.
ದ.ಕ. ಸಿರಿಗನ್ನಡ ಸಾಹಿತ್ಯ ವೇದಿಕೆಯ ಸುಳ್ಯ ತಾಲೂಕಿನ ಕಾರ್ಯದರ್ಶಿ, ಬೆಳಕು ರಾಜ್ಯ ಸಂಸ್ಥೆಯ ದ.ಕ ಜಿಲ್ಲಾ ಮಹಿಳಾ ಅಧ್ಯಕ್ಷೆ, ಕಡಲೂರಿನ ಲೇಖಕರು, ಪುತ್ತೂರು ಸಾಹಿತ್ಯ ವೇದಿಕೆ, ಸ್ನೇಹ ಸಂಗಮ, ಹನಿಹನಿ ಇಬ್ಬನಿ, ನಿಸ್ವಾರ್ಥ ಸಾಹಿತ್ಯ ಸೇವಾ ಸಂಸ್ಥೆ , ಕರುನಾಡ ಹಣತೆ, ಕವಿವೃಕ್ಷ ಬಳಗ , ವಿಶ್ವ ಕನ್ನಡ ಸಾಹಿತ್ಯ ಪರಿಷತ್, ಸುಧೆ ಟ್ರಸ್ಟ್ ಮೊದಲಾದ ಸಾಹಿತ್ಯ ಸಂಘಗಳ ಸದಸ್ಯಳಾಗಿರುವೆ.
ಪ್ರಸ್ತುತ ವಿಳಾಸ- ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ, ದ.ಕ ೫೭೪೨೩೯
@ಪ್ರೇಮ್@
9901327499