ಸೋಮವಾರ, ಡಿಸೆಂಬರ್ 3, 2018

625..ವಿಮರ್ಶೆ

*ಚಂದ ಗೆಡಿಸಿದೆ...*
ತಾಳಿ ಬೊಟ್ಟು ಕಟ್ಟಿ
ಆಚೆ ಈಚೆಗೆರಡು ಹವಳ ಹಾಕಿ
ಸಿಂಗಾರ ಮಾಡಬೇಕೆಂದಿದ್ದೆ
ಇದೇನು ಮಾಡಿದೆ ಗೆಳತಿ
ಏಕೆ ಅಂದಗೆಡಿಸಿದೆ..

🌹🌹🌹🌹🌹🌹🌹🌹🌹

ಗೆಳತಿಗೆ ತನ್ನ ಮನದಿಂಗಿತವನ್ನರುಹುವ ಸಾಲುಗಳು ಅನರ್ಘ್ಯ.. ತನ್ನ ಬಾಳಿಗೆ ಬೆಳಕಾಗಬೇಕೆಂದಿದ್ದವಳ ಕೊರಳಿಗೆ ನಾನು ಹೇಗೆ ಶೃಂಗಾರ ಮಾಡಿದ ತಾಳಿಯನ್ನು ಹವಳಗಳಿಂದ ಪೋಣಿಸಿ ಅಂದವಾಗಿ ಕಟ್ಟಬೇಕೆಂದುಕೊಂಡ ಕನಸನ್ನು ಮುರಿದವಳ ಹಾಗೆಯೇ ತನ್ನ ಜೀವನದ ಕನಸುಗಳ ಮುರಿದವಳ ಬಗೆಗಿನ ಬೇಸರವು ಈ ಸಾಲುಗಳಲ್ಲಿ ವ್ಯಕ್ತವಾಗಿದೆ.
🌹🌹🌹🌹🌹🌹🌹🌹🌹

ಸ್ನೇಹದಿಂದ ಜತನಮಾಡಿ
ಪ್ರೀತಿಯಿಂದ ಜ್ವಾಪಾನಮಾಡಿದೆ
ಹೀಗೇಕೆ ನನ್ನೇ ದೂರಮಾಡಿ
ಬದುಕ ಅಂದಗೆಡಿಸಿದೆ..
🌹🌹🌹🌹🌹🌹🌹🌹🌹
ತನ್ನ ಸ್ನೇಹ ಎಂಥದ್ದು, ಅದನ್ನು ನಾನು ನಿನಗೆ ನೀಡಿದೆ, ನೀನೂ ನನಗೆ ಅದನ್ನು ನೀಡಿರುವೆ ಎಂದು ಭಾವಿಸಿದೆ, ಆದರೆ ನೀನದನ್ನ ಕಸಿದುಕೊಂಡು ನನ್ನ ಜೀವನದಲ್ಲಿ ಆಟವಾಡಿ ನನ್ನ ಬದುಕಿನ ಅಂದವೇ ಇಂದು ಮಾಸಿಹೋಗಿದೆಯೆನುವ ಬೇಸರದ ಭಾವ ಇಲ್ಲೂ ಮೂಡಿ ಬಂದಿದೆ. ಸಹಜ ಸಾಲುಗಳು ಖುಷಿಕೊಡುತ್ತವೆ.
🌹🌹🌹🌹🌹🌹🌹🌹🌹

ಎಣ್ಣೆ ಹಚ್ಚಿ ಕ್ರಾಪುತೀಡಿ
ಬಲು ಜತನಮಾಡಿದ ಮುಂದಲೆ
ಕೂದಲೇ ಮೊದಲು ಉದುರಿ
ಬೊಕ್ಕ ತಲೆ ಮಾಡಿ ರೂಪಕೆಡಿಸಿದಂತೆ
ಏಕೆ ಬಾಳ ಚಂದ ಕೆಡಿಸಿದೆ...

...ಗಂಧರ್ವ...
🌹🌹🌹🌹🌹🌹🌹🌹🌹

ಉಪಮೆಯಿಂದ ಕೂಡಿದ ಚರಣವಿದು. ಜನರು ಕೂದಲ ಬೆಳವಣಿಗೆಗಾಗಿ ಅದೆಷ್ಟು ಸರ್ಕಸ್ ಮಾಡುವರು! 'ಒಂದು ಮೊಟ್ಟೆಯ ಕತೆ' ಸಿನಿಮಾ ನೆನಪಾಯಿತು ನನಗೆ ಈ ಸಾಲುಗಳನ್ನು ಓದುವಾಗ.. ಕೂದಲಿಗೆ ಎಣ್ಣೆ ಹಚ್ಚಿ, ಜೆಲ್ ಹಾಕಿ, ಕ್ರಾಪನ್ನು ತೀಡಿ ಹಲವಾರು ಸಾರಿ ಬಾಚಿ ಅಂದಗೊಳಿಸಿ ದಿನನಿತ್ಯ ಬೆಳೆಸಿಯೂ ಒಂದು ದಿನ ಅದೆಲ್ಲಾ ಉದುರಿ ಬೋಳು ತಲೆಯಾದ ಅನುಭವ ಅವಳು ಹೋದ ಮೇಲೆ! ಆಹಾ.. ಎಂಥ ಉಪಮೆ! ಗಂಧರ್ವರಿಗೆ ಅವರೇ ಸಾಟಿ... ಉತ್ತಮ ಕವನ ಓದಿಸಿದ್ದಕ್ಕೆ ಧನ್ಯವಾದಗಳು..
                   @ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ