ಮಂಗಳವಾರ, ಡಿಸೆಂಬರ್ 11, 2018

638. ಕರ್ನಾಟಕ


ಕರ್ನಾಟಕವಿದು...

ಕನ್ನಡದ ತವರಿದು ಬಾ  ಕಂದ ಕುಣಿದು
ಮನದೊಳಗೆ ಖುಷಿಪಡುವೆ ನೀ ಮನದಣಿದು..//ಪ//

ಪಂಪ ಹರಿಹರ ರನ್ನ ಜನ್ನರನೋದಿಹೆವು
ಕುವೆಂಪು ಬೇಂದ್ರೆಯ ಕೃತಿಗಳ ಆರಾದಿಸುತಿಹೆವು..

ನೀಲಕಂಠನ ನೀಲಿ ಕಡಲ ತಡಿಯಲಿ ಆಡಿ
ಸೂರ್ಯನ ಕೆಂಪು ಕಿರಣ
ಕನ್ನಡ ಬಾವುಟದಲಿ ನೋಡಿ//

ಆರೋಗ್ಯದ ಅರಶಿನವೂ ಬಣ್ಣ ತಳೆದಿಹುದಿಲ್ಲಿ
ನುಡಿ  ಕನ್ನಡ ನಡೆ ಕನ್ನಡ ಎಂದ ರತ್ನನ ಪದಗಳಲಿ..//

ಸರ್ವಜ್ಞನ ವಚನಗಳ ಅಂದವ ಹಾಡಿ
ಡಿವಿಜಿಯ ಕಗ್ಗಗಳು ನಿತ್ಯ ಮನದಿ ಮೂಡಿ//

ರಾಜ ಕುಮಾರನ ಕಂಠಕಿಹುದು ತನ್ನದೇ ಮೋಡಿ
ಭುವನೇಶ್ವರಿ ನಗುತಿಹಳು ಹೆಮ್ಮೆಯಿಂದ ಮಕ್ಕಳ ಕೂಡಿ//

ಅಮೇರಿಕೆಯಲೂ ಇಹುದಂತೆ ಕನ್ನಡದ ತೇರು
ಎಳೆಯುತಿರುವವರು ಕನ್ನಡಮ್ಮನ ಮಕ್ಕಳಲ್ಲದೆ ಮತ್ತಾರು//

ತನುಮನ ಹೃದಯವೂ ಕನ್ನಡದಲಿ ವ್ಯವಹರಿಸಲಿ
ದೆಹಲಿಯೊಳೂ ಇದೆ ಕನ್ನಡ ಸಂಘ ತಿಳಿದು ನಲಿ//

ಎಲ್ಲೇ ಹೋದರೂ ಏನೇ ಬಂದರೂ ಕನ್ನಡ ಬಿಡಬೇಡಿ..
ಎಲ್ಲಾ ಭಾಷೆಗಳ ಕಲಿತು, ಕನ್ನಡವ ಮಾತನಾಡದೆ ಇರಬೇಡಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ