ಮಂಗಳವಾರ, ಡಿಸೆಂಬರ್ 11, 2018

640.ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-24

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-24
ಕಂಪ್ಯೂಟರ್ ನ ಮಾಯಾಜಾಲ

ಕಲಿತಷ್ಟು ಸಾಲದು.. ಕಲಿತಷ್ಟು ಮುಗಿಯದು ಈ ಕಂಪ್ಯೂಟರ್ ಲೋಕವೆಂಬ ಸರದಾರ. ಒಂದನೆ ತರಗತಿಯ ಮಕ್ಕಳಿಂದ ಹಿಡಿದು ಪಿ. ಹೆಚ್.ಡಿ ಕಲಿಯುವವರಿಗೂ, ಡಾಕ್ಟರ್ , ಇಂಜಿನಿಯರ್ ಗಳಿಗೂ ಇದರ ಉಪಯೋಗವಿಲ್ಲವೇ..? ಅಷ್ಟೇ ಅಲ್ಲದೆ ಎಲ್ಲಾ ಅಂಗಡಿ, ಮಳಿಗೆಗಳಲ್ಲೂ, ಬಿಲ್ ಗಳನ್ನು ಕೊಡಲು, ಸಿ.ಸಿ. ಕ್ಯಾಮೆರಾದಲ್ಲಿನ ವೀಡಿಯೋ ಹಾಗೂ ಚಿತ್ರಗಳನ್ನು ನೋಡಲು, ಉಪಗ್ರಹ ಉಡಾವಣೆಯ ಸಮಯದಲ್ಲಿ ಉಪಗ್ರಹದ ಪಥವನ್ನು ಅರಿಯಲೂ ಕೂಡಾ ಬೇಕು.
   ಆರೋಗ್ಯದ ಬಗೆಗಿನ ಕಾಳಜಿ, ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ , ಅಲ್ಟ್ರಾಸಾನಿಕ್ ನಿಂದ ಹಿಡಿದು, ರೋಗಿಯ ಮಾತ್ರೆ, ಮದ್ದಿನವರೆಗೆ, ಮನೆ, ಕಟ್ಟಡಗಳ ಪ್ಲಾನಿಂಗ್ ನಿಂದ ಹಿಡಿದು, ಪ್ರತಿ ವಸ್ತುಗಳ ಖರ್ಚಿನವರೆಗೆ, ಕಛೇರಿಯಿಂದ ಹಿಡಿದು ದೇಶ-ಪ್ರಪಂಚದ ಆಯವ್ಯಯದವರೆಗೆ ಲೆಕ್ಕಾಚಾರಕ್ಕೂ, ಮಾಹಿತಿಗೂ, ವಿಚಾರ ತಿಳಿಯಲು,ತಿಳಿಯಪಡಿಸಲು ಈ ಕಂಪ್ಯೂಟರಿ್ಗಳು ಅತ್ಯವಶ್ಯಕ. ಬ್ಯಾಂಕ್, ಎಲ್ಲೈಸಿ, ಪೋಸ್ಟ್ ಆಫೀಸು ಗಳಲ್ಲಂತೂ ಕಂಪ್ಯೂಟರ್ಗಳದ್ದೇ ಕಾರುಬಾರು!
   ಇಂದಿನ ಯುಗದಲ್ಲಿ ಯಾವುದೇ ಯೋಜನೆಗಳು, ಯಾವುದೇ ವಿಭಾಗದಲ್ಲಿ ಮುಂದುವರೆದರೂ ಅವು ಕಂಪ್ಯೂಟರ್ ನಿಂದ ಹೊರತಾಗಿಲ್ಲ. ಮುಂದೆ ಒಂದು ಸಲ ಕುಡಿಯಲೂ, ತಿನ್ನಲೂ ಕಂಪ್ಯೂಟರ್ ಇಲ್ಲದೆ ಸಾಧ್ಯವಿಲ್ಲ ಎನ್ನುವ ಕಾಲವೂ ಬರಬಹುದೇನೋ.. ಒಟ್ಟಿನಲ್ಲಿ ಆಧುನಿಕ ಯುಗವೆಂದರೆ ಕಂಪ್ಯೂಟರ್! ಮೊಬೈಲ್ ಅದರ ಮರಿ, ಯಾವುದು ಇಲ್ಲದೆಯೂ ನಾವು ಬದುಕಲಾರೆವು! ಇಡೀ ಪ್ರಪಂಚವೇ ನಮ್ಮ ಕೈಲಿದೆ! ವಿಪರ್ಯಾಸವೆಂದರೆ ಅಮೇರಿಕಾದಲ್ಲಿರುವ ಗೆಳೆಯನೊಬ್ಬನೊಂದಿಗೆ ದಿನಾಲೂ ನಮ್ಮ ಮಾತುಕತೆ, ವೀಡಿಯೋ ಚಾಟಿಂಗ್ ಸಾಗಿರುತ್ತದೆ, ಪಕ್ಕದ ಮನೆಯ ಅಜ್ಜಿಗೆ ಅನಾರೋಗ್ಯವಾಗಿ, ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದದ್ದು ನಮಗೆ ತಿಳಿಯುವಾಗ ಮೂರು ದಿನಗಳಾಗಿರುತ್ತದೆ! ನಮ್ಮನ್ನು ನಾವೇ ಅಪ್ ಡೇಟ್ ಮಾಡಿಕೊಳ್ಳ ಬೇಕು, ಕಂಪ್ಯೂಟರ್ ನ ಹಾಗೆ ದಿನಾಲೂ. ನೀವೇನಂತೀರಿ?
@ಪ್ರೇಮ್@
premauday184@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ