ಬಣ್ಣದೋಕುಳಿ
ಕುಂಚವು ಬಹಳವೆ ಚಿಕ್ಕದು
ಆಕಾಶ ಬಹಳವೆ ದೊಡ್ಡದು
ಕುಂಚವ ಹಿಡಿದು ಆಗಸಕೆ
ಬಣ್ಣವ ಹಚ್ಚಿದ ಪರಿ ಹೇಗೆ?
ಮುಂಜಾನೆ ಕಾಣುವ ಬಿಳಿಯು
ಮಧ್ಯಾಹ್ನ ಕಾಣುವ ನೀಲಿಯು
ಸಂಜೆಯದುವೇ ಕೆಂಪು-ಕೇಸರಿಯು
ಬಣ್ಣ ಬದಲಿಸುವುದು ಗಗನವು..
ಸೂರ್ಯನು ಹುಟ್ಟುತ ಅಚ್ಚ ಕೆಂಪು
ನಡುವಿಗೆ ಬರುತಲಿ ಕತ್ತಲ ಜೊಂಪು
ಸಂಜೆಯದು ಗಾಢ ಕೇಸರಿಯ ಇಂಪು
ರಾತ್ರಿಗೆ ಬರಿ ಕತ್ತಲು-ಕಾಣದ ಒನಪು..
ರವಿಯ ಕಣ್ಣಲಿ ಬಿರುಸಿನ ಟಾರ್ಚು
ಚಂದಮಾಮನು ಹೊಳೆಯುವ ದೋಸೆ
ಸೂರ್ಯ ತಿನ್ನುವ ಚಂದ್ರನ ಸ್ವಲ್ಪವೆ
ಅಮವಾಸ್ಯೆಗೆ ಮಾಮ ಪೂರ್ತಿ ಖಾಲಿಯೆ..
ಸೂರ್ಯ-ಚಂದ್ರರದೆ ಓಕುಳಿಯಾಟ
ಬಣ್ಣವ ಬಾನಲಿ ಚೆಲ್ಲುವ ಆಟ
ನಾನೂ ಸೇರುವೆ ಕುಂಚವ ಹಿಡಿದು
ಹಾಕುವೆ ಎಲ್ಲಾ ಬಣ್ಣವ ಬಳಿದು...
@ಪ್ರೇಮ್@
26.11.2018
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ