ಶನಿವಾರ, ಡಿಸೆಂಬರ್ 8, 2018

633. ತಂದೆಯ ಯಾತನೆ

1. ನನ್ನೇಕೆ ಉಳಿಸಿದೆ

ದೇವ ನಿನ್ನ ನಂಬಿ ನಾನು
ನನ್ನ ಮಗುವ ಸಾಕಿದೆ....
ಕಾವೆಯೆಂಬ ಮನದಿ ಬಾಗಿ
ನಮಿಸಿ ಬದುಕ ಸವೆಸಿದೆ..

ಆದರೇನು ಮಗಳ ಮದುವೆ
ವಯಸು ಕೂಡಿ ಬಂದಿದೆ!
ಬಡವ ನಾನು ನೋಡಿ ವರನ
ಮದುವೆ ಮಾಡೊ ಬಯಕೆಯು...

ಕೊಡಲಾರೆ ಚಿನ್ನ ವಸ್ತ್ರ ಹವಳ
ಸಂಕಟವು ನನ್ನ ಮನಸಿಗೆ...
ದೇವ ನೀನು ಏಕೆ ತಂದೆ
ನನ್ನ ಈ ಬಾಳ ಭೂಮಿಗೆ...

ತಡೆಯಲಾರೆ ಸಹಿಸಲಾರೆ
ಮನದ ನೋವು ತುಮುಲವ
ದೇವ ನನ್ನ ಹಾಗೆ ಬರದೆ ಇರಲಿ
ಬದುಕು ಯಾವ ತಂದೆಗೂ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ