ತಾಯಿ ಭಾರತಿ
ತಾಯಿ ನಿನಗೆ ಮಕ್ಕಳಿಂದ ಗೆಲುವಿನಾರತಿ
ದೇಶ ದೇಶ ಸುತ್ತಿದರೂ ನಮ್ಮ ತಾಯಿ ಭಾರತಿ//
ಬದುಕಲದು ಬೇಕು ನಮಗೆ ನಿತ್ಯ ನಿನ್ನ ಲೀಲೆ
ನೀನು ನೀರು ಆದಾಗಲೆ ನಾನು ಬೆಳೆವ ನೈದಿಲೆ//
ಮನದ ಮನೆಯ ಮಹಲಿನಲಿ ನೀನೆ ನೆಲೆಸಿಹೆ
ಸ್ವಚ್ಛ ಹೃದಯ ಸೂಕ್ಷ್ಮ ಬುದ್ಧಿ ನೀನೆ ನೀಡಿಹೆ//
ಹಿಮಾಲಯವು ನೇರ ನಿಂತು ನಿನ್ನ ಸಲಹಿದೆ
ಗಂಗೆ, ಸಿಂಧು, ಬ್ರಹ್ಮಪುತ್ರ ನದಿಯ ಹರಿಸಿದೆ//
ಪರ್ವತಗಳು ಸಾಲು ನಿನಗೆ ಮಾಲೆಯಾಗಿದೆ
ಹಸಿರು ವನದ ಗಿಡಮರಗಳು ಧಿರಿಸ ನೀಡಿದೆ//
ಅಮ್ಮನೆಂಬ ಮಮತೆಯಿಂದ ಕೋಟಿ ಕೋಟಿ ಜನರಿಹರು
ತಮ್ಮ ಹೆಜ್ಜೆ ಹೋದಲೆಲ್ಲ ನಿನ್ನ ಹೆಸರ ನೆನೆಸುತಿಹರು//
ನಮ್ಮ ದೇಶ ನಮಗೆ ಹಮ್ಮೆ, ನಾವು ನಿನ್ನ ಮಕ್ಕಳು
ಯಾವ ಪುಣ್ಯವೋ ಕಾಣೆ ತಾಯಿ ನಮಗೆ ಸಿಕ್ಕಳು//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ