ಪ್ರಾರ್ಥನೆ
ದೇವ ನಿನ್ನ ನಂಬಿ ನಮ್ಮ
ಜೀವ ಯಾನ ಸಾಗಿದೆ..
ನಿನ್ನ ಕರುಣೆಯಿಂದ ಎಲ್ಲ
ಜಗದ ಕಾರ್ಯ ಬೆಳಗಿದೆ...
ನಿನ್ನ ಚರಣಕೆರಗಿ ಬದುಕೆ
ಮೇಲೆ ಮೇಲೆ ಸಾಗುವೆ..
ಬೇಡಿದಂಥ ವರವನೆಲ್ಲ
ನಿತ್ಯ ನೀನು ನೀಡುವೆ..
ನನ್ನ ಮನದ ಕತ್ತಲನ್ನು
ಸರಿಸಿ ಬೆಳಕ ನೀಡೆಯಾ..
ವಿದ್ಯೆ-ಬುದ್ಧಿ ಜ್ಞಾನ ಕೊಟ್ಟು
ಸಲಹಿ ಕಾಪಾಡೆಯಾ..
ನಿನ್ನ ವರವೆ ನಮ್ಮ ನಲಿವು
ಕರವೆ ದಿವ್ಯ ನಂಬಿಕೆ..
ಕಾವೆಯೆಂಬ ಬಯಕೆ ನನಗೆ
ಬರುವೆ ನಿನ್ನ ಸನಿಹಕೆ..
@ಪ್ರೇಮ್@
6.12.2018
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ