ಬಾಳ ದಿನಗಳು
ಗಳಗಳನೆ ಕುಡಿಯುತ ಗಬಗಬನೆ ತಿನ್ನುತ
ಒಲವ ಹರಿಸುತ ಪ್ರೀತಿ ಹಂಚುತ
ಫಲವ ಬಯಸದೆ ಕಾರ್ಯವೀಯುತ
ಬಳಪ ಹಿಡಿಯುತ ನಿತ್ಯ ಕಲಿಯುತ...
ಕಲಕಲನೆ ಕಲರವ ದಿನದ ಜೊತೆಯಲಿ
ಕೆಲ ಘಳಿಗೆ ಅಮರವು ಬಾಳ ದಿನದಲಿ
ಪುಳಕ ತರುವ ಜನರ ಸಹವಾಸದಲಿ
ಹವಳದಂತೆ ಹೊಳೆ ನೀ ಜಗದಲಿ..
ಬಯಸಿ ಬಂದ ಬದುಕು ಸಿಗದು
ಪ್ರತಿ ಹೆಜ್ಜೆಯಲ್ಲು ಸ್ನೇಹ ಬರದು
ದೇವ ನಿನ್ನ ವರವು ಮಾಸದು
ಮನಕೆ ಮುದವನು ಅದುವೆ ತರುವುದು..
ಕ್ಷಣದ ಬವಣೆಯು ಮುಂದೆ ಇರದು
ಹೆಜ್ಜೆ ಹೆಜ್ಜೆಗೂ ಸೋಲು ಗೆಲುವದು
ನೋಡಿ ಅರಿತು ಬಾಳು ನಡೆವುದು
ಕೊನೆಗೆ ಒಮ್ಮೆ ಮುಕ್ತಿ ಸಿಗುವುದು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ