ಕರ್ನಾಟಕ
ಕನ್ನಡದ ತವರಿದು ಬಾ ಕಂದ ಕುಣಿದು
ಮನದೊಳಗೆ ಖುಷಿಪಡುವೆ ನೀ ಮನದಣಿದು..
ಪಂಪ ಹರಿಹರ ರನ್ನ ಜನ್ನರನೋದಿಹೆವು
ಕುವೆಂಪು ಬೇಂದ್ರೆಯ ಕೃತಿಗಳ ಆರಾದಿಸುತಿಹೆವು..
ನೀಲಕಂಠನ ನೀಲಿ ಕಡಲ ತಡಿಯಲಿ ಆಡಿ
ಸೂರ್ಯನ ಕೆಂಪು ಕಿರಣ ಕನ್ನಡ ಬಾವುಟದಲಿ ನೋಡಿ
ಆರೋಗ್ಯದ ಅರಶಿನವೂ ಬಣ್ಣ ತಳೆದಿಹುದಿಲ್ಲಿ
ನುಡಿ ಕನ್ನಡ ನಡೆ ಕನ್ನಡ ಎಂದ ರತ್ನನ ಪದಗಳಲಿ..
ಸರ್ವಜ್ಞನ ವಚನಗಳ ಅಂದವ ಹಾಡಿ
ಡಿವಿಜಿಯ ಕಗ್ಗಗಳು ನಿತ್ಯ ಮನದಿ ಮೂಡಿ
ರಾಜ ಕುಮಾರನ ಕಂಠಕಿಹುದು ತನ್ನದೇ ಮೋಡಿ
ಭುವನೇಶ್ವರಿ ನಗುತಿಹಳು ಹೆಮ್ಮೆಯಿಂದ ಮಕ್ಕಳ ಕೂಡಿ
ಎಲ್ಲೇ ಹೋದರೂ ಏನೇ ಬಂದರೂ ಕನ್ನಡ ಬಿಡಬೇಡಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ