ನಾನೇನೂ ಅಲ್ಲ, ನಾನು ನಾನಾಗಿಲ್ಲ
ಬದುಕೇನು ಭಯವೇನು
ಇಂದು ನಾಳಿನ ದಿನವೇನು ಕ್ಷಣವೇನು!
ದೈವ ಸೃಷ್ಠಿಯ ಬಾಳು ಬರಿದೇನು?
ನಿನ್ನೊಲುಮೆ ಬದುಕಾಗಿ, ದಿನವಾಗಿ
ವರುಷಗಳಾಗಿ ಹೊಳೆದು ಮಿನುಗಿ..
ಮರುಕ್ಷಣವೆ ಕತ್ತಲ ಅಂಧಕಾರ ಪೂರ್ತಿ
ಕರೆಂಟು ಹೋದಂತೆ ಕರಾಳ ರಾತ್ರಿ
ಅಲ್ಲೆಲ್ಲೋ ಮಿಂಚು ಹುಳದ
ಸಣ್ಣದೊಂದು ಬೆಳಕ ಕಿಡಿ
ಜೀವ ಜೇನ ಹನಿಯ ತೊಟ್ಟಿನಂತೆ
ಮತ್ತೆ ಬದುಕಿಗೆ ಒಂದು ಆಸೆ
ನಾಳೆ ಚೆನ್ನಾಗಿರಬಹುದು ಇಂದಿಗಿಂತ
ಕೇಳಿಸಿಕೊಂಡು ತಿಳಿದವ ದೇವ
ನಮ್ಮ ಕ್ಷಣಗಳ ಲೆಕ್ಕ ಹಾಕುವವ
ಇಂದುಂಟು ನಾಳೆಯೂ ಉಂಟು
ಬದುಕಲುಂಟು ಬಳಲನುಂಟು
ನಗಲುಂಟು ಅಳಲುಂಟು
ಜೀವನದ ದಡ ಸೇರಲುಂಟು...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ