ಮಂಗಳವಾರ, ಡಿಸೆಂಬರ್ 11, 2018

637.ಅನಿಸಿಕೆ

ಟಾಲ್ಪ್ ತರಬೇತಿಯ ಬಗ್ಗೆ ನನ್ನ ಅನಿಸಿಕೆ

ಒಂದು ತಿಂಗಳ ತರಬೇತಿಯನ್ನು ಹತ್ತು ದಿನದಲ್ಲಿ ಮುಗಿಸುವ ಹಾಗೆ ಕಾಣುತ್ತದೆ. ಇಂದಿನ ತರಗತಿಯ ಬಳಿಕ ನನಗನಿಸಿದ್ದು ಮೊದಲೇ ಹತ್ತನೇ ತರಗತಿ ಪಾಠ ಮುಗಿಯದೆ ಒದ್ದಾಡುತ್ತಿರುವ, ಎಂಟು ಮತ್ತು ಒಂಭತ್ತನೇ ತರಗತಿಯಲ್ಲೂ ಶೇಕಡಾ ನೂರು ಫಲಿತಾಂಶ ತರಲು ಪಣತೊಟ್ಟು ಹೋರಾಡುವ ಶಿಕ್ಷಕರಿಗೆ ಮತ್ತೊಂದು ನುಂಗಲಾರದ ತುತ್ತು ಹಾಗೂ ಟೆನ್ಶನ್ ನ ಮಾತ್ರೆಯಂತಿದೆ ಈ ತರಬೇತಿ. ಡಿಪ್ಲಮೋ ತರಗತಿಯಲ್ಲಿ ಒಂದು ವರುಷದಲ್ಲಿ ಕಲಿಯುವುದು ಇಲ್ಲಿ ಹತ್ತು ದಿನದಲ್ಲಿ ಮುಗಿಸಬೇಕಿದೆ. ಇದು ತುಂಬಾ ಅನ್ಯಾಯ. ತರಬೇತಿಯ ಪಠ್ಯಗಳು ತುಂಬಾ ಉಪಯುಕ್ತ ಹಾಗೂ ಆಸಕ್ತಿದಾಯಕ. ಮದುವೆ ಊಟ ಚೆನ್ನಾಗಿರುತ್ತದೆ, ರುಚಿ ಎಲ್ಲವೂ ಹೌದು, ಹಾಗಂತ ದಿನದಲ್ಲಿ  ನಾಲ್ಕು ಸಲ ಮದುವೆಯ ಊಟವನ್ನೇ ತಿನ್ನಲು ಸಾಧ್ಯವೇ.. ಒತ್ತಡಗಳ ನಡುವೆ ಬದುಕುತ್ತಿರುವ ಶಿಕ್ಷಕರಿಗೆ ದಿನಕ್ಕೆ ನಾಲ್ಕಾರು ಅಸೈನ್ ಮೆಂಟ್ಸ್! ಸಂಜೆ ಕಣ್ಣು-ಬೆನ್ನು ನೋವು. ತರಗತಿಯಲ್ಲಿ ಬ್ಯುಸಿಯಾಗಿ ಸಮಯ ಹೋದುದೇ ತಿಳಿಯುವುದಿಲ್ಲ. ಹಲವಾರು ಶಿಕ್ಷಕರ  ಸಂದೇಹಗಳಿಗೆ ಒಬ್ಬರೇ ಆರ್ ಪಿ. ನಿಭಾಯಿಸುವುದೂ ಕಷ್ಟ ಸಾಧ್ಯ! ಬೆಳಗ್ಗಿನಿಂದ ಸಂಜೆಯವರೆಗೆ ಒಬ್ಬರೇ ಆರ್. ಪಿ ಒದ್ದಾಡುತ್ತಿರುತ್ತಾರೆ. ವಿಂಡೋಸ್ ನಲ್ಲಿ ಕೆಲಸ ಮಾಡಿದ ಶಿಕ್ಷಕರು, ಲಿನೆಕ್ಷ್ ಮಿಂಟ್ ನಲ್ಲಿನ್ನೂ ಯುಕೆಜಿಯಲ್ಲಿದ್ದಾರೆ. ನನ್ನ ಮಟ್ಟಿಗಂತೂ ಯುಕೆಜಿ ಮಕ್ಕಳಿಗೆ ಐದನೇ ತರಗತಿಯ ಸಿಲೆಬಸ್ ತಂದು ತುರುಕಿದಂತಾಗಿದೆ. ಕಲಿಯುವ ತುಡಿತವಿದೆ, ಕಲಿಯಬಲ್ಲೆವು, ಆದರೆ ಒತ್ತಡ ಜಾಸ್ತಿಯಾಗಿದೆ ಎಂದೆನಿಸುತ್ತದೆ ನನಗೆ ಈ ಟಾಲ್ಪ್ ತರಬೇತಿ.
@ಪ್ರೇಮ್@
11.12.2018

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ