ಅಮರವಾಗಲಿ ಬಾಳು.
ಅನುರಣಿತಗೊಳ್ಳುತಿದೆ ಅನುಮಾನ ಅನವರತ.
ಅರಿವಾಗಬೇಕಿದೆ ಅವನತಿ ಇದರಿಂದ ಅನುದಿನ...
ಅವಸರವಸರದ ಅವಲಂಬನೆಯ ಬಾಳಿದು
ಅವನಿಯೊಳು ನೀನೆನಗೆ ನಾನಿನಗೆ ಆತು...
ಅಳದೆ ಜೀವಿಸಲಾರೆ, ಅಹಂಭಾವ ಸಲ್ಲದು
ಅವಹೇಳನ ತಪ್ಪಿದ್ದಲ್ಲ ಅನಾವರಣಗೊಂಡರೂ..
ಅವರವರೊಳಗೆ ನಗೆಮಾತು ಇತರರು ತಡೆಯರು
ಅವಸಾನದ ಅಂಚಿನಲೂ ಅಪಾರ ಒಲವು..
ಅದರದೊಳು ಬರಲಿ ಅಕ್ಷರಗಳು ಅವಿರತ
ಆದರವು ಅಳಿಸದಿರಲಿ ಮನಗಳ ಅನಂತ..
ಅವಿನಾಭಾವ ಸಾಯದ ಸಂಬಂಧವೇ ಇರಲಿ
ಅಪ್ಪ-ಅಮ್ಮ-ಅಣ್ಣ-ಅಕ್ಕ-ಅತ್ತೆ-ಅಜ್ಜ-ಅಜ್ಜಿಯೆಂದು,
ಅರಳು ಮರಳಾಗುವವರೆಗೂ ಅಚಲವಾಗಿರಲಿ ಅಭಯ..
ಅನಾಯಾಸದಿ ಸಾಗಲಿ ಅನವರತ ಕ್ಷಣವು..
ಅವರಿವರ ಮಾತದು ಅಪಾರವೇ ಇಹುದು,
ಅದಕೆಲ್ಲ ಅಂಜಿದೆಡೆ ಅಜಗಜಾಂತರ ಜೀವನ.
ಅರಳು ಅತ್ತಿಯಲು ಹುಳುವಿಹುದು ಜಗದೊಳು
ಅತಿನಿದ್ದೆ, ಅತಿಯೆನಿಸುವುದ ಯಾವುದೂ ಸಲ್ಲ..
ಅರಿವಿರಲಿ ಅರುವತ್ತು ನಿಮಿಷಗಳೂ ಅಂಜಿಕೆ ಬೇಡ..
ಅಚಂಚಲತೆಯಿರಲಿ ಅನುಮಾನ ಕಾಡದಿರಲಿ.
ಅಪರಾಧ ಬೇಕಿಲ್ಲ, ಅಮರತ್ವವಿರಲಿ
ಅನುದಿನವು ಈಶನ ನಾಮಕೆ ಅವಕಾಶವಿರಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ