ಸೋಮವಾರ, ಜುಲೈ 8, 2019

1094.ಏಳು ಎದ್ದೇಳು

ಏಳು ಎದ್ದೇಳು

ನಾರುಮುಡಿ, ನೈಲಾನ್, ಟೆರಿಲಾನ್ ಕಿತ್ತೆಸೆದು
ನೆಟ್ಟಗೆ ಹತ್ತಿಯ ಬಟ್ಟೆಯ ಧರಿಸುತಲಿ,
ಫ್ಯಾಶನ್ ಲೋಕಕೆ ಹೋಗುವನಂತೆ
ಕಣ್ಣು ಕಾಣದ ಕನ್ನಡಕದ ಸ್ಟೈಲದು ಬೇಕೇ?

ಪ್ರೀತಿಯ ಮಾತದು ಸರ್ವಗೆ ಸಾಕು,
ತೋರಿಕೆ ಗತ್ತದು ಯಾರಿಗೆ ಬೇಕು?
ಸಾಧನೆಗೆಂದೂ ಸಾಧಕ, ಸಾಧನೆ ಗುರಿಯು
ಸೋಮಾರಿಗೆ ತಕ್ಕ ಸೊನ್ನೆಯ ಪ್ರತಿಫಲವು!
ಬಲ ಮೈಲಿರುವಾಗಲೆ ಬೇಕು ದುಡಿತದ ಫಲವು,

ದೂರಕ್ಕಟ್ಟಲು ಬೇಕು ನಮ್ಮ ಜಡತನವನು!
ಮೈಮನ ಒಂದಾಗಿ ದುಡಿವವ ಅಲ್ಲ ರೋಗಿ,
ತಾನು ದುಡಿದು ಗಳಿಸುವವ ನಿಜ ಯೋಗಿ,
ಪರರ ಬಗೆಗೆ ಹೀಗಳೆದವ ನಿಕೃಷ್ಟ, ಕನಿಷ್ಟ!
ತನ್ನ ಕೆಲಸ ತಾ ಮಾಡಿದವ ಪಡೆವ ಗರಿಷ್ಠ!
ಜಾಗೃತಿ ಬೇಕು ತನ್ನಯ ಕಾರ್ಯದಿ,
ಪ್ರತಿದಿನ ಪ್ರತಿಕ್ಷಣ ಮುನ್ನಡೆ ಪಡೆಯುತ,
ತನ್ನಯ ಮನವನು ತಾನೇ ಹರಿತವಗೊಳಿಸುತ!

ಇಂದಿನ ಸಾಧನೆ ನಾಳೆಗೆ ಕ್ಷೀಣವು,
ನಮ್ಮಯ ಮನವೇ ನಮ್ಮಯ ಸ್ಪರ್ಧಿಯು,
ಸಾಧನೆ ಬೇಕೇ ಕ್ಷಣಕ್ಷಣ ಕಲಿತುಕೋ
ಉಳಿಪೆಟ್ಟು ತಿಂದ ಶಿಲ್ಪವ ಅರಿತುಕೋ..
@ಪ್ರೇಮ್@
08.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ