ಸೋಮವಾರ, ಜುಲೈ 8, 2019

1095. ಹೀಗೊಮ್ಮೆ

ಹೀಗೊಮ್ಮೆ

ಬೆಳ್ಳಿಚುಕ್ಕಿ ಕಳ್ಳನಾಗಿ ಸುಳ್ಳನಂತೆ ತಳ್ಳಿ ನನ್ನ
ಮಳ್ಳಿ ಹಾಗೆ ಉರುಳಿಕೊಂಡು ಬಳ್ಳಿಯಂತೆ ಬಳುಕಿ ಬಂತು!  ಮಲ್ಲಿಗೆಯ ಕಂಪ ತಂದು, ಹಳ್ಳಿಯಿಂದ ಎದ್ದು ಬಂತು,
ಮೆಲ್ಲ ಬಂದು  ಒಂದೇ ಒಂದು ಸೊಲ್ಲನ್ನುಸುರಿ ಓಡಿಹೋಯ್ತು!
ಕಳ್ಳ ನೀನು ಕೆಲಸದಲ್ಲಿ ಕಷ್ಟಪಟ್ಟು ದುಡಿಯಬೇಕು!
ನಿನ್ನ ಕಾಲ ಮೇಲೆ ನಿಂತು ಇತರಗಾಧಾರವಾಗಬೇಕು,
ಕೈಯ ನೀಡಿ ಬೇಡಬೇಡ,
ಕೈಯನೆತ್ತಿ ದಾನ ಮಾಡು,
ಆಶೀರ್ವಾದ ಪಡೆಯುತ್ತಲಿ, ಬೋಧನೆಯ ನೀಡುವವನಾಗು"
ಇಷ್ಟು ಹೇಳಿ ಮಾಯವಾಯ್ತು, "ಕನಸು ಸಾಕು
ಏಳೋ ಮೇಲೆ."
ಅಮ್ಮ ಗದರೆ ಕೇಳೆ ಕಿವಿಯು
ಬೇಗನೆ ಏಳಲು ಸೂಚನೆಯ ನೀಡಿತು ಮನಕೆ!
ಎದ್ದು ನೋಡೆ ಗಂಟೆ ಏಳು!
ಏಳು ಅಂತು ಗಡಿಯಾರವೂ..

@ಪ್ರೇಮ್@
08.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ