ಮಂಗಳವಾರ, ಜುಲೈ 9, 2019

1113. ಪರದೆ ಸರಿಸಿ

ಪರದೆ ಸರಿಸಿ

ಮನದ ಮಂಪರಿನ ಪರದೆ ಸರಿಸಿ
ವನದ ಹಸಿರನು ನಿತ್ಯ ಉಳಿಸಿ!
ಕನಸ ಗೂಡಿನ ಒಳಗೆ ಗುರಿಯ ನಿಲ್ಲಿಸಿ!
ನನಸ ಮಾಡುವ ಮಧುರ ಕಾರ್ಯವ ಬೆಳೆಸಿ!

ಮಂಗಳ ಕಾರ್ಯದಿ ಕಂಗಳ ತಣಿಸಿ,
ಕುಳಿತು ನಿಂತುಂಡು ಹೊಟ್ಟೆಯನೂ ತಣಿಸಿ,
ಹೊರಬರುತಲಿ ಕೊಟ್ಟವಗೆ ಬೇಡದ್ದನೆಣಿಸದೆ,
ನಾಲ್ಕಾರು ಹಿತನುಡಿಯ ನುಡಿದು ಒಳ್ಳೆಯ ಹರಸಿ!

ಪರರು ಹೇಳಿದ್ದನ್ನೆಲ್ಲ ಕಣ್ಮುಚ್ಚಿ ಕೇಳಿಸಿ,
ನಿಜವನರಿಯದೆ ವಿಷಯವ ಇತರರಿಗೆ ಮುಟ್ಟಿಸುತ,
ಸರಿತಪ್ಪ ತಿಳಿಯದೆ ತನ್ನ ನಾಲಗೆಯ ಹಾಳುಗೆಡವುತ,
ತಾನೆ ಮೇಲೆನುವ ಮನದ ಪರದೆಯನು ಸರಿಸಿಬಿಡಿ!

ಕಾಳು ತಿನ್ನುವ ಹಕ್ಕಿಗಳ ನೋಡಿ ಕಲಿತು,
ಇತರರಿಗೆ ಕೆಟ್ಟದ ಮಾಡದೆ ತನ್ನ ಪಾಡಿಗೆ ತಾವು,
ತಾ ಬದುಕುತ, ಕಷ್ಟಪಡುತ ,ತನ್ನ ಕರ್ತವ್ಯ ಮಾಡುತ,
ನಮ್ರತೆಯ ಬಾಳುವೆಯ ಕಲಿಸಬೇಕು ಮನಕೆ!
@ಪ್ರೇಮ್@
10.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ