ಮಂಗಳವಾರ, ಜುಲೈ 9, 2019

1099. ಗಝಲ್-83

ಗಝಲ್-83

ಸಂತಸವ ಗಂಟಿನಂತೆ ನೀಡುವಂಥವರಾಗೋಣ ನಮ್ಮ ಮನಕೆ!
ಬೆಳಕ ಕೊಡುವ ಸೂರ್ಯರು ನಾವಾಗೋಣ ನಮ್ಮ ಮನಕೆ!

ಒತ್ತಡ, ಆಲೋಚನೆ, ಪರರ ಬಗೆಗಿನ ಕೆಡುಕ ತೊರೆಯೋಣ,
ಒಳಗಿನ ಶಕ್ತಿಯ ಅರಿವು ಮಾಡಿಕೊಡೋಣ ನಮ್ಮ ಮನಕೆ..

ತಂದೆ,ತಾಯಿ ಗುರು-ಹಿರಿಯರ ಗೌರವಿಸಲು ತಿಳಿಸೋಣ,
ತಾಯಿ ಭಾರತಿಯ ಒಡಲಿಗೆ ಕಸವ ಸುರಿಯದಂತೆ ತಡೆಯೋಣ ನಮ್ಮ ಮನಕೆ!

ಕಂಡ ಕಂಡಲ್ಲಿ ಕ್ಯಾಕರಿಸಿ ಉಗಿಯುವುದ, ಜಗಳವಾಡುವುದ ಬಿಡೋಣ,
ಪಾನ್,ಬೀಡಾ,ಗುಟ್ಕಾಗಳ ನಿಲಿಸಿ ಪ್ಲಾಸ್ಟಿಕ್ ಬಿಸಾಕದಿರಲು ಸಲಹೆ ನೀಡೋಣ ನಮ್ಮ ಮನಕೆ!

ಕಸವ ಕಂಡಲ್ಲಿ ಶುದ್ಧಗೊಳಿಸುವ  ಗುಣವ ಬೆಳೆಸಿಕೊಂಡು ಪ್ರಜ್ಞಾವಂತರಾಗೋಣ,
ನೆಲ, ಜಲ, ವಾಯು, ಶಬ್ದ ಮಾಲಿನ್ಯಕೆ ಕಾರಣರಾಗದಂತೆ ಕರೆಯ ಕೊಡೋಣ ನಮ್ಮ ಮನಕೆ!

ಗಿಡ ಮರಗಳ ಸಾವಿಗೆ, ನಾಶಕೆ ನಾವೇ ಕಾರಣರಾಗದಿರೋಣ,
ಕೈಯಾರೆ ಗಿಡಗಳ ನೆಟ್ಟು, ನೀರುಣಿಸಿ ಬೆಳೆಸುವ ಬುದ್ಧಿ ಹೇಳೋಣ ನಮ್ಮ ಮನಕೆ!

ಸರ್ವ ಜನಮನದಿ ಸ್ನೇಹ ಪ್ರೇಮವ ಬೆಳೆಸಿಕೊಳ್ಳೋಣ,
ಒಳಗೊಳಗೆ ಕುದಿಯದಂತೆ ತಂಪಾಗಿಸಿ  ನೆಮ್ಮದಿಯಿಂದಿರುವಂತೆ ಆಶಿಸೋಣ ನಮ್ಮ ಮನಕೆ.
@ಪ್ರೇಮ್@
04.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ