ಅರ್ಥ ಆಗ್ಲಿಲ್ಲ..
ಗಝಲ್-87
ಸುಳಿಗಾಳಿಗೆ ಸುಳಿ ಸುಳಿಯುತ ಸುಳಿದಾಡುವೆ ನೀ ಮನವೇ..
ಕುಳಿರ್ಗಾಳಿಗಿಂತಲೂ ವೇಗದಿ ಓಡಾಡುವೆ ನೀ ಮನವೇ..
ಹಳಿತಪ್ಪಿದ ರೈಲಂದದಿ ಕೆಳಗುರುಳಿ ಬೀಳದಿರು ನೀನು..
ಕಳಕಳಿಯಿಂದ ಬೇಡುತಿಹೆ ವೇಗದಿ ನುಗ್ಗುತಿರುವೆ ನೀ ಮನವೇ..
ಪುಷ್ಯ ವರ್ಷವು ಧರೆಗುರುಳುವ ತೆರದಿ ಉರುಳುತಲಿರುವೆ,
ಹಾಸ್ಯ ಪ್ರವೃತಿ ಬೆಳೆಸುತ ನಡೆಯಬೇಕಲ್ಲವೆ ನೀ ಮನವೇ?
ಮಾತೃ ಹೃದಯದ ಪ್ರೀತಿಯರಿತು ನಡೆಯಬೇಕಲ್ಲವೇ..
ಭ್ರಾತೃತ್ವವ ತೊರೆಯದೆ ಬದುಕಬೇಕಲ್ಲವೆ ನೀ ಮನವೇ..
ಪ್ರೀತಿಯ ಹಂಚುತ ತೃಪ್ತಿಯ ಕಾಣುತ ನಲಿಯುತಿರು,
ಪ್ರೇಮದ ಮುತ್ತನು ಎಲ್ಲೆಡೆ ಚೆಲ್ಲುತ ಬಾಳಬೇಕಲ್ಲವೆ ನೀ ಮನವೇ..
ತ್ಯಾಗಬುದ್ಧಿಯ ಕಲಿತು ಯೋಗಿಯಾಗಬೇಕು ನನ್ನ ಪ್ರಿಯನೇ,
ಯೋಗ್ಯನಾಗಲು ಧ್ಯಾನದಿ ಕಾರ್ಯವ ಮಾಡಬೇಕಲ್ಲವೆ ನೀ ಮನವೇ?
ತಕರಾರು ಮಾತ ಬಿಡು, ತವರ ಮನೆಯನು ನೆನೆ,
ತರವಲ್ಲ ಇತರರ ತರಹೇವಾರಿ ಚರ್ಚೆ ಅಲ್ಲವೆ ನೀ ಮನವೇ?
@ಪ್ರೇಮ್@
10.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ