ಶುಕ್ರವಾರ, ಜುಲೈ 5, 2019

1092. ಸ್ಪರ್ಧೆ

ಸ್ಪರ್ಧೆ

ತಂದೆಯ ಹೆಣ ಬದಿಯಲ್ಲಿತ್ತು.!
ಮೂವರು ಬೆಳೆದ ಗಂಡು ಮಕ್ಕಳು ಪಕ್ಕದಲ್ಲಿದ್ದರು!
ಪ್ರತಿಯೊಬ್ಬರಿಗೂ ಮಣ್ಣು ಮಾಡುವುದರಲ್ಲಿ ಅದ್ದೂರಿತನ!
ಒಬ್ಬರಿಗಿಂತ ಒಬ್ಬರು ತನ್ನ ಸಾಮರ್ಥ್ಯ ತೋರುವುದರಲ್ಲಿದ್ದರು!

ಮೊದಲನೆಯ ರಾಜೇಶ ತಾನೇನು ಕಡಿಮೆಯೇ?
ತಂದೆಯನ್ನು ಪಲ್ಲಕ್ಕಿಯಲ್ಲಿ ಹೊರಿಸುವುದೆಂದ!
ಕಿಲೋ ಮೀಟರ್ ದೂರದ ಶ್ಮಶಾನಕ್ಕೆ ಗಟ್ಟಿ ಮೇಳ, ನೃತ್ಯ, ವಾದ್ಯಗಳೊಂದಿಗೆ ಕರೆದುಕೊಂಡು ಹೋಗೋಣಂದ!

ಎರಡನೆಯವ ಬ್ರಿಜೇಶ ಅವನಿಗಿಂತ ಮುಂದು!
ಅಳುವುದಕ್ಕಾಗಿ ಒಂದು ತಂಡ ತರುವೆನೆಂದ!
ರಾತ್ರಿ ದೇವರ ಭಜನೆಯಿರಿಸೋಣವೆಂದ!
ನೆಂಟರಿಗೆ ಪಕ್ಕದ ಮನೇಲೆ ಊಟ ಕೊಡೋಣವೆಂದ!

ಮೂರನೆಯವ ತುಂಬಾ ಮಾಡರ್ನ್ ಮಗ!
ಪಕ್ಕದ ಮೆಡಿಕಲ್ ಕಾಲೇಜಿಗೆ ದಾನ ದೇಹ ಮಾಡೋಣವೆಂದ!
ಕಣ್ಣು ,ಕಿಡ್ನಿ,ಹೃದಯ ಕೊಟ್ಟು ಬಿಡೋಣ ಅಂದ!
ಮೆಡಿಕಲ್ ಮಕ್ಕಳು ಅದ ಪ್ರಯೋಗಕ್ಕೆ ಬಳಸಲೆಂದ!
ಮಾವ ಬಂದು ಎಲ್ಲರ ತಡೆದರು!
ಹಿರಿಯರು ಹೇಳಿದಂತೆ ಮಾಡೆಂದರು!
ಅದ್ದೂರಿತನ ಏನೂ ಬೇಡವೆಂದರು!
ಹಿಂದಿನವರಂತೆ ಸಾಧಾರಣವಾಗಿ ಶ್ಮಶಾನಕ್ಕೆ ತೆಗೆದುಕೊಂಡು ಹೋಗಲು ಅಪ್ಪಣೆಯಿತ್ತರು!
ಎಲ್ಲರಂತೆ ರಾಯರು ಮಣ್ಣಿನೊಳಗೆ ಒಂದಾದರು!
@ಪ್ರೇಮ್@
09.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ