ಗಝಲ್-81
ಏನೆಲ್ಲ ಜಗದಿ ನೋಡಿ ನಲಿಯಲಿಕ್ಕಿದೆ ದೋಸ್ತ್,
ಎಲ್ಲವೂ ಮಾನವನ ಅಧೀನದಲ್ಲಿದೆ ದೋಸ್ತ್..
ಸೂರ್ಯ, ಚಂದ್ರ, ಆಕಾಶ,ನಕ್ಷತ್ರಗಳು ಮಸ್ತ್!
ಅವುಗಳ ಬರುವಿಕೆಗೂ ತಡೆಯಾಗಲಿದೆ ದೋಸ್ತ್!
ಗಾಳಿ, ನೀರು, ಮಣ್ಣು ಸೇರಿ ಕೆಡಿಸಿಹರು ಜಗತ್!
ಪರಿಸರದೊಂದಿಗೆ ಮಾನವನೂ ನಾಶವಾಗಬೇಕಿದೆ ದೋಸ್ತ್!
ಗೂಂಡಾಗಿರಿ, ಕೊಲೆ, ದರೋಡೆ, ಮಾನಭಂಗ!
ನಾಯಿ, ನರಿ, ಗೂಬೆಗಳಿಗಿಂತ ಬಾಳು ಕಡೆಯಾಗಿದೆ ದೋಸ್ತ್!
ನಗರ ಬೆಳೆದಿದೆ, ಮರವು ಉರುಳುತಲೇ ಇದೆ!
ಜಗತ್ತು ಹಾಲಿನಂತೆ ಬಿಳಿಯಾಗುತ್ತಲಿದೆ ದೋಸ್ತ್!
ವರ್ಷ ದೂರವಾಗಿ, ನೆಲವು ಬಿರುಕು ಬಿಡುತಲಿದೆ,
ಹರ್ಷ ಹಸಿರಿನಂತೆಯೇ ದೂರವಾಗುತಿದೆ ದೋಸ್ತ್!
ನೀನೆನಗೆ ನಾನಿನಗೆಂಬ ಭಾವ ಮಾಸಿ ಹೋಗುತಲಿಹುದು,
'ನಾನೇ' 'ನನ್ನಿಂದಲೇ' ಎಂಬ ಹಮ್ಮು ಬರುತಲಿದೆ ದೋಸ್ತ್!
ಪರೋಪಕಾರ, ಪರಹಿತ, ಪ್ರೇಮ ಮರೆತಿಹರು ಆದ್ಮಿ,
ಪರಿಚಯವೆ ಇಲ್ಲದಂತೆ ಬದುಕು ಸಾಗುತಲಿದೆ ದೋಸ್ತ್!
@ಪ್ರೇಮ್@
01.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ