ಮಂಗಳವಾರ, ಜುಲೈ 16, 2019

1119. ಅರಗಿಣಿ

ಅರಗಿಣಿ
ಹಸಿರಾಗಿಹ ನೀ ಪರಿಸರವ ಸಂಕೇಚಿಸುವೆ
ಕೆಂಪು ಕೊಕ್ಕಲಿ ವೀರ ಯೋಧರ ಸ್ಮರಿಸುವೆ!
ಹಣ್ಣನು ಕುಕ್ಕುತ ತಿಂದು ಬೀಜ ಪ್ರಸಾರಕೆ ನೆರವಾಗುವೆ,
ಪರಿಸರವ ಕಾಯ್ವವ ನೀನು ಎಲೆಯ ಮರೆಯಲಿರುವೆ//

ಚರಪರ ರಾಗವು ನಿನ್ನದು ಅದರಲೆ ಹಾಡುವೆ,
ದೇವರು ಕೊಟ್ಟಿಹ ರೂಪವ ಪ್ರೀತಿಯಿಂದ ಸ್ವೀಕರಿಸಿರುವೆ,
ಮರದಲೆ ಗೂಡನು ಕಟ್ಟುತ ಸಂಸಾರ ಸಾಗಿಸುವೆ,
ಊರಿಂದೂರಿಗೆ ಚಲಿಸುತ ದಿನಗಳ ಕಳೆಯುತಿಹೆ//

ಮಾನವನ ಮಾತನು ಅನುಕರಿಸಿ ಪ್ರಿಯನಾಗಿರುವೆ,
ಮಾತಾಡುವ ಪಕ್ಷಿಯೆಂಬ ಹೆಗ್ಗಳಿಕೆ ಪಡೆದಿರುವೆ,
ಪ್ರೀತಿಯ ಸಾಕುವ ಪಕ್ಷಿಯೂ ನೀನಾಗಿ ಮೆರೆದಿರುವೆ
ಗಿಣಿರಾಮನೆಂಬ ಹೆಸರನು ಪಡೆದು ನಕ್ಕು ನಗಿಸಿರುವೆ//

ಮಾನವ ನಿನ್ನಯ ಮನೆಯನು ಬಿಡಿಸಿ ಗೂಡಲಿ ಹಾಕುವನು,
ನಿನ್ನಯ ಸ್ವಾತಂತ್ರ್ಯವ ಕಿತ್ತು ಪಂಜರದಿ ಕೂಡುವನು,
ಯಾರಿಗೂ ತಂಟೆಯ ಮಾಡದ ನಿನ್ನ ಒಂಟಿಯಾಗಿಡುವನು,
ತನ್ನಯ ಆನಂದಕೆ ನಿನ್ನ ಜೀವನ ಕೊಲ್ಲುವನು//
@ಪ್ರೇಮ್@
14.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ